Publish Date: Tue, 02 Aug 2022 (17:45 IST)
Updated Date: Tue, 02 Aug 2022 (17:47 IST)
ಒಂದೆಡೆ ಭಾರಿ ಮಳೆಯಿಂದ ರಸ್ತೆಗಳು ಜಲಾವೃತಗೊಂಡು, ಮರಗಳು ನೆಲಕಚ್ಚಿದ್ರೆ...ಇತ್ತ ಧಾರಾಕಾರ ಸುರಿದ ಮಳೆಗೆ ರಸ್ತೆಗುಂಡಿ ಕಾಣದೇ ಬೈಕ್ ಮೇಲಿಂದ ಸವಾರ ಬಿದ್ದಿರುವ ಘಟನೆ M.S.ಪಾಳ್ಯ ಜಂಕ್ಷನ್ ಬಳಿ ನಡೆದಿದೆ. ಬೈಕ್ ಸವಾರನ ತಲೆಗೆ ಗಂಭೀರ ಗಾಯವಾಗಿದೆ. ಕೆಲಸ ಮುಗಿಸಿಕೊಂಡು ಮಳೆಯ ನಡುವೆ ಬೈಕ್ ಮೂಲಕ ಮನೆಗೆ ವಾಪಸ್ಸಾಗುತ್ತಿದ್ದ ಯುವಕ ಯಲಹಂಕ ಸಂಚಾರಿ ಠಾಣಾ ವ್ಯಾಪ್ತಿಯ M.S.ಪಾಳ್ಯ ಜಂಕ್ಷನ್ ಬಳಿ ಮಳೆನೀರಿನಿಂದ ತುಂಬಿದ್ದ ರಸ್ತೆ ಗುಂಡಿಗೆ ಬಿದಿದ್ದಾನೆ. ಕಾಮಗಾರಿಗೆಂದು ಅಗೆದು ಸರಿಯಾಗಿ ಮುಚ್ಚದೆ ಹಾಗೆಯೇ ಬಿಟ್ಟಿರುವುದರಿಂದ ಈ ಅವಘಡ ಸಂಭವಿಸಿದ್ದು, ಗಾಯಾಳು ಸವಾರನನ್ನ ಖಾಸಗಿ ಅಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.