Publish Date: Wed, 16 Oct 2019 (16:38 IST)
Updated Date: Wed, 16 Oct 2019 (16:40 IST)
ಆ ನಗರದ ಮುಖ್ಯರಸ್ತೆಯಲ್ಲೇ ಸಸಿ ನೆಟ್ಟು ಗಮನ ಸೆಳೆಯಲಾಗಿದೆ.
ಹಳೇ ಹುಬ್ಬಳ್ಳಿಯ ಆನಂದ ನಗರ ರಸ್ತೆಯಲ್ಲಿ ಬಿದ್ದ ಗುಂಡಿಗಳಲ್ಲಿ ಸಸಿ ನೆಡುವ ಮೂಲಕ ಬಹುಜನ ಸಮಾಜ ಪಾರ್ಟಿ ಜಿಲ್ಲಾ ಘಟಕದ ಕಾರ್ಯಕರ್ತರು ವಿನೂತನವಾಗಿ ಪ್ರತಿಭಟನೆ ನಡೆಸಿದ್ದಾರೆ. ರಸ್ತೆ ಗುಂಡಿಳ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಆನಂದ ನಗರ ರಸ್ತೆ -ಕಾರವಾರ ರೋಡ್ ಗಿರಣಿಯಿಂದ ಕೆಎಚ್‌ಬಿ ಕಾಲೋನಿ ಕ್ರಾಸ್ ಹಾಗೂ ವೆಲ್‌ಕಮ್ ಹಾಲ್‌ನಿಂದ ಮಂಜುನಾಥ ನಗರದ ಮೂಲಕ ಗೋಕುಲ ರಸ್ತೆಯವರೆಗೆ ಸಂಪೂರ್ಣ ಹಾಳಾಗಿವೆ. ಪಾಲಿಕೆ ಅಧಿಕಾರಿಗಳು ಕಾಟಾಚಾರಕ್ಕೆ ತಾತ್ಕಾಲಿಕವಾಗಿ ಮಣ್ಣು, ಕಲ್ಲು ಹಾಕಿ ತೇಪೆ ಹಚ್ಚುವ ಕೆಲಸ ಮಾಡಿದ್ದಾರೆ. ಇದರ ಪರಿಣಾಮದಿಂದ ಆಗಾಗ ಸುರಿದ ಮಳೆಯಿಂದ ರಸ್ತೆಯಲ್ಲಿ ಮತ್ತೆ ಗುಂಡಿ ನಿರ್ಮಾಣಗೊಂಡಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪಾದಚಾರಿಗಳು, ವಾಹನ ಸವಾರರು ಇಲ್ಲಿ ಸಂಚಾರ ಮಾಡಲು ಹರಸಾಹಸ ಪಡುವಂತಾಗಿದೆ. ಮಹಾನಗರ ಪಾಲಿಕೆ ಶೀಘ್ರವೇ ಈ ರಸ್ತೆ ಗುಂಡಿ ಮುಚ್ಚುವ ಕೆಲಸ ಮಾಡಬೇಕು. ಇಲ್ಲದಿದ್ದಲ್ಲಿ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದ್ರು.