Publish Date: Tue, 09 Oct 2018 (13:59 IST)
Updated Date: Tue, 09 Oct 2018 (14:01 IST)
ಆಟೋ ಚಾಲಕನ ಬಳಿ 500 ರೂ.ಗೆ ಬಾಡಿಗೆ ಮಾತನಾಡಿಕೊಂಡ ದುಷ್ಕರ್ಮಿಗಳು ನಿರ್ಜನ ಪ್ರದೇಶಕ್ಕೆ ಕರೆತಂದು ರಾಬರಿ ಮಾಡಲು ಯತ್ನಿಸಿರುವಂತಹ ಘಟನೆ ನಡೆದಿದೆ.
ಬೆಂಗಳೂರು ಹೊರವಲಯದ ಬನ್ನೇರುಘಟ್ಟ ಸಮೀಪದ ಬಿಂಗಿಪುರ ಬಳಿ ಆಟೋ ಚಾಲಕನ ರಾಬರಿಗೆ ಯತ್ನ ನಡೆದಿದೆ. ಬೆಳಂಡೂರಿನ ಆಟೋ ನಿಲ್ದಾಣದ ಬಳಿ ಬಂದ ಓರ್ವ ವ್ಯಕ್ತಿ ಬಿಂಗಿಪುರಕ್ಕೆ 500 ರೂ.ಗೆ ಆಟೋ ಬಾಡಿಗೆ ಮಾತನಾಡಿ ನಂತರ ಮಾರ್ಗ ಮಧ್ಯೆ ಇನ್ನಿಬ್ಬರು ಸ್ನೇಹಿತರಿಗೆ ಕರೆ ಮಾಡಿ ಆಟೋ ಹತ್ತಿಸಿಕೊಂಡಿದ್ದಾನೆ.
ದುಷ್ಕರ್ಮಿಗಳು ಬಿಂಗಿಪುರದ ಬಳಿಯಿರುವ ನೀಲಗಿರಿ ತೋಪಿನ ಬಳಿ ರಾಬರಿಗೆ ಯತ್ನಿಸಿದ್ದು, ಆಟೋ ಚಾಲಕ ಆಟೋವನ್ನು ಬಿಟ್ಟು ಪರಾರಿಯಾಗಿದ್ದಾನೆ. ನಂತರ ಹುಲ್ಲಹಳ್ಳಿ ಗೇಟ್ ನ ಆಟೋ ನಿಲ್ದಾಣದ ಬಳಿ ಇದ್ದಂತಹ ಆಟೋ ಚಾಲಕರಿಗೆ ಘಟನೆ ವಿವರಿಸಿದ ನಂತರ ಸ್ಥಳಕ್ಕೆ ಹೋಗುವಷ್ಟರಲ್ಲಿ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ.
ನಂತರ ಬನ್ನೇರುಘಟ್ಟ ಪೊಲೀಸರಿಗೆ ಮಾಹಿತಿ ತಿಳಿಸಿದ್ದು, ಸ್ಥಳಕ್ಕೆ ಬನ್ನೇರುಘಟ್ಟ ಪೋಲಿಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.