Publish Date: Fri, 23 Aug 2019 (15:30 IST)
Updated Date: Fri, 23 Aug 2019 (15:32 IST)
ಮಾಡೆಲ್ ಕ್ಷೇತ್ರದಲ್ಲಿ ಬ್ಯೂಟಿಫುಲ್ ಆಗಿದ್ದ ಮಹಿಳೆಯೊಬ್ಬಳಿಗೆ ಚಾಲಕನೊಬ್ಬ ಮಾಡಬಾರದ್ದನ್ನು ಮಾಡಿ ಈಗ ಪೊಲೀಸರ ಅತಿಥಿಯಾಗಿದ್ದಾನೆ.
ಕಳೆದ ತಿಂಗಳು ರಾಜಧಾನಿ ಬೆಂಗಳೂರಿನಲ್ಲಿ ಓಲಾ ಕ್ಯಾಬ್ ಚಾಲಕನೊಬ್ಬನು ಮಾಡೆಲ್ ಒಬ್ಬಳನ್ನು ಕೊಲೆ ಮಾಡಿ ಚಿನ್ನಾಭರಣ ದರೋಡೆ ಮಾಡಿದ್ದನು.
ಮಾಡೆಲ್ ಪಶ್ಚಿಮ ಬಂಗಾಳ ಮೂಲದ ಪೂಜಾ ಸಿಂಗ್ ಎಂದು ಗುರುತಿಸಿರೋ ಪೊಲೀಸರು, ಇದೀಗ ಆರೋಪಿಯಾಗಿರೋ ಓಲಾ ಕ್ಯಾಬ್ ಚಾಲಕ ಹೆಚ್.ಎಂ.ನಾಗೇಶ್ ನನ್ನ ಬಂಧನ ಮಾಡಿದ್ದಾರೆ.
ಓಲಾ ಕ್ಯಾಬ್ ನಲ್ಲಿ ಪ್ರಯಾಣಿಸೋವಾಗ ಚಾಲಕ ನಾಗೇಶ್ ನು ಮಾಡೆಲ್ ಮೇಲೆ ಹಲ್ಲೆ ಮಾಡಿ ಕೊಲೆ ಮಾಡಿದ್ದನು. ಆ ಬಳಿಕ ಅವಳ ಬಳಿಯಿದ್ದ ಹಣ, ಚಿನ್ನಾಭರಣ ದೋಚಿಕೊಂಡು ಪರಾರಿಯಾಗಿದ್ದನು.