ಕ್ಯಾಂಡಿ ಆಸೆ ತೋರಿಸಿ ಅಪ್ರಾಪ್ತೆ ಮೇಲೆ ಸಾಮೂಹಿಕ ಅತ್ಯಾಚಾರ, ಕೊಲೆ

ಗುರುವಾರ, 22 ಆಗಸ್ಟ್ 2019 (18:13 IST)
ಮನೆ ಮುಂದೆ ಆಟವಾಡುತ್ತಿದ್ದ ಅಪ್ರಾಪ್ತ ಬಾಲಕಿಯನ್ನು ಕ್ಯಾಂಡಿ ಆಸೆ ತೋರಿಸಿ ಆಕೆಯ ಮೇಲೆ ಅತ್ಯಾಚಾರ ನಡೆಸಿ ಕೊಲೆ ಮಾಡಿರೋ ಅಮಾನವೀಯ ಘಟನೆ ವರದಿಯಾಗಿದೆ.

1 ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ಅಪ್ರಾಪ್ತ ಬಾಲಕಿಯು ತನ್ನ ಮನೆ ಮುಂದೆ ಆಟವಾಡುತ್ತಿದ್ದಳು. ಆದರೆ ಚಿಂದಿ ಆಯುವ ಹುಡುಗರಿಬ್ಬರು ಅವಳಿಗೆ ಆಮಿಷ ಒಡ್ಡಿ ಕರೆದುಕೊಂಡು ಹೋಗಿ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ. ಬಳಿಕ ಬಾಲಕಿಯನ್ನು ಕೊಲೆ ಮಾಡಿದ್ದಾರೆ.

ಬಾಲಕಿಯ ಶವವನ್ನು ಕೊಲೆಗಾರರ ತಾಯಿಯೇ ದೂರ ಸಾಗಿಸಲು ನೆರವಾಗಿದ್ದಾಳೆ. ಬಾಲಕಿಯ ಪೋಷಕರು ಈ ಕುರಿತು ಕೇಸ್ ನೀಡಿದ್ದು, ಆರೋಪಿಗಳನ್ನು ಬಂಧನ ಮಾಡಲಾಗಿದೆ.

ಉತ್ತರ ಪ್ರದೇಶದ ಲಖಿಂಪುರ ಖೇರಿ ಜಿಲ್ಲಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಪ್ರೇಯಸಿ ತೆಕ್ಕೆಗೆ ಜಾರಿದ ಗಂಡನ ಕಥೆ ಮುಗಿಸಿದ ಹೆಂಡತಿ