ಅಡಿಕೆ ಕಳ್ಳರಿಗೆ ಬಿತ್ತು ಧರ್ಮದೇಟು

Webdunia
ಸೋಮವಾರ, 15 ಅಕ್ಟೋಬರ್ 2018 (12:36 IST)
ಅಡಿಕೆ ಕದಿಯಲು ಬಂದವರನ್ನು ಹಿಡಿದ ಸಾರ್ವಜನಿಕರು ಕಂಬಕ್ಕೆ ಕಟ್ಟಿ  ಹೊಡೆದಿರುವ ಘಟನೆ ನಡೆದಿದೆ.

ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿಯಲ್ಲಿ  ಈ ಘಟನೆ ನಡೆದಿದೆ. ಮೂವರು ಯುವಕರನ್ನು ಅಡಿಕೆ ಕಳ್ಳತನ ಮಾಡುತ್ತಿದ್ದರೆಂಬ ಆರೋಪದ ಮೇಲೆ ಸಾರ್ವಜನಿಕರೇ ಹಿಡಿದು ಕಂಬಕ್ಕೆ ಕಟ್ಟಿ ಥಳಿಸಿದ್ದಾರೆ. ಚಿಕ್ಕನಾಯಕನಹಳ್ಳಿಯ ಕುಮಾರ್ ಎಂಬುವವರ ಮನೆಯಲ್ಲಿ ಅಡಿಕೆ ಕದಿಯಲು  ಮೂವರು ಯುವಕರು ಬಂದಿದ್ದರು.

ಈ ಮೂವರ ಪೈಕಿ ಓಬ್ಬನನ್ನು ಸಾರ್ವಜನಿಕರು ಹಿಡಿದರು. ಪರಾರಿಯಾಗಿದ್ದ ಇನ್ನಿಬ್ಬರನ್ನು ಸಿಕ್ಕಿಬಿದ್ದಿದ್ದ ಕಳ್ಳನ ಮೂಲಕ ಮಾಹಿತಿ ಪಡೆದು ಸೆರೆಹಿಡಿದರು. ಅವರನ್ನೂ ಹಿಡಿದು ತಂದು ಕಂಬಕ್ಕೆ ಕಟ್ಟಿಹಾಕಿ ಥಳಿಸಿದರು. ಚಿಕ್ಕನಾಯಕನಹಳ್ಳಿಯಲ್ಲಿ ಗುಜರಿ ಅಂಗಡಿಗಳಲ್ಲಿ ಕೆಲಸ ಮಾಡುತ್ತಿದ್ದ ಈ ಮೂವರು, ಅನೇಕ ದಿನಗಳಿಂದ ಚಿಕ್ಕನಾಯಕನಹಳ್ಳಿ ಸುತ್ತಮುತ್ತಲ ಪ್ರದೇಶದಲ್ಲಿ ಕಳವು ಮಾಡುತ್ತಿದ್ದರು.

ರಾತ್ರಿ ಕಳ್ಳತನ ಮಾಡಲು ಬಂದಿದ್ದ ವೇಳೆ ಸಾರ್ವಜನಿಕರು ಸೆರೆಹಿಡಿಯಲು ಹೋದಾಗ ಚಾಕು ತೋರಿಸಿ ಬೆದರಿಸಿ ಪರಾರಿಯಾಗಿದ್ದರು. ಕಳೆದೆರಡು 2 ತಿಂಗಳಿನಿಂದ ಅಡಿಕೆ ಮತ್ತು ದ್ವಿಚಕ್ರವಾಹನಗಳನ್ನು ಕಳವು ಮಾಡುವ ಪ್ರಕರಣಗಳು ನಡೆದಿತ್ತು. ಯುವಕರರು ಈ ರೀತಿ ಚಾಕು ಚೂರಿ ತೋರಿಸಿ ಕಳ್ಳತನ ಮಾಡುತ್ತಿದ್ದುದು ಜನರಲ್ಲಿ ಭೀತಿ ಮೂಡಿಸಿತ್ತು.


ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಯುಜಿಸಿ ಹೊಸ ನಿಯಮ ಎಂದರೇನು, ಇದರ ವಿರುದ್ಧ ಪ್ರತಿಭಟನೆಗಳು ಯಾಕಾಗ್ತಿವೆ

ಇಂಧನ ಇಲಾಖೆಯಲ್ಲಿ ಸಿಎಂ ಪುತ್ರನದ್ದೇ ಕಾರುಬಾರು: ಬೇಸತ್ತು ರಾಜೀನಾಮೆಗೆ ಮುಂದಾಗಿದ್ರಾ ಜಾರ್ಜ್

Arecanut Price: ಅಡಿಕೆ, ಕಾಳುಮೆಣಸು ಇಂದಿನ ಮಾರುಕಟ್ಟೆ ದರ ಹೇಗಿದೆ

Gold Price: ಚಿನ್ನ, ಬೆಳ್ಳಿಗೆ ಇಂದು ಹಿಂದೆಂದೂ ಕಾಣದ ಬೆಲೆ ಏರಿಕೆ

ಅಜಿತ್ ಪವಾರ್ ಕೊನೆಯ ಕ್ಷಣ ಎನ್ನಲಾದ ವಿಡಿಯೋ ಈಗ ವೈರಲ್

ಮುಂದಿನ ಸುದ್ದಿ
Show comments