Select Your Language

Notifications

webdunia
webdunia
webdunia
webdunia

ವಿಮಾನದಲ್ಲಿ ಬಂದು ಮನೆಗಳ್ಳತನ ಮಾಡುತ್ತಿದ್ದವನ ಬಂಧನ

ವಿಮಾನದಲ್ಲಿ ಬಂದು ಮನೆಗಳ್ಳತನ ಮಾಡುತ್ತಿದ್ದವನ ಬಂಧನ
ಬೆಂಗಳೂರು , ಶನಿವಾರ, 6 ಅಕ್ಟೋಬರ್ 2018 (18:22 IST)
ಮೋಜು, ಮಸ್ತಿ ಮಾಡಲು ವಿಮಾನದಲ್ಲಿ ಬಂದು ಮನೆ ಕಳ್ಳತನ ಮಾಡುತ್ತಿದ್ದ ಆರೋಪಿಯನ್ನು ಬಂಧಿಸಲಾಗಿದೆ.
ಪಂಚತಾರಾ ಹೋಟೇಲುಗಳಲ್ಲಿ ವಾಸ್ತವ್ಯ ಮಾಡುವುದಲ್ಲದೇ ವಿಮಾನದಲ್ಲಿ ಪ್ರಯಾಣಿಸಿ ಮನೆಕಳ್ಳತನ ಮಾಡುತ್ತಿದ್ದ ಆರೋಪಿಯನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಪೂರ್ವ ದೆಹಲಿಯ ಲೋನಿ ರಸ್ತೆಯ ನಿವಾಸಿ ಅಮ್ರಾನ್ ಖಾನ್ ಅಲಿಯಾಸ್ ಅಮಾನ್ ಸೋನಿ(26), ಕಲಾಸಿಪಾಳ್ಯದ ವಿನ್ಸೆಂಟ್ ಅಲಿಯಾಸ್ ಡೆವಿಡ್ (62), ತಮಿಳುನಾಡಿನ ನಾಗಪಟ್ಟಣಂನ ಕಾಳಿದಾಸ್ (36) ಹಾಗೂ ಯೋಗನಾಥನ್ ಬಂಧಿತ ಆರೋಪಿಗಳಾಗಿದ್ದಾರೆ ಎಂದು ನಗರ ಪೊಲೀಸ್ ಆಯುಕ್ತ ಸುನಿಲ್ ಕುಮಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಮೋಜು, ಮಸ್ತಿ ಮಾಡಲು ಹೈಟೆಕ್ ರೀತಿಯಲ್ಲಿ ಮನೆಗಳ್ಳತನ ಮಾಡುತ್ತಿದ್ದ ಆರೋಪಿಗಳು ಇವರಾಗಿದ್ದಾರೆ ಎಂದು ತಿಳಿಸಿದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

ಸಾಲಮನ್ನಾ: ಹೆಚ್ಡಿಕೆ ವಿರುದ್ಧ ಬಿಎಸ್ವೈ ಆರೋಪ