Select Your Language

Notifications

webdunia
webdunia
webdunia
webdunia

ಎರಡನೇ ಪತ್ನಿ ಅಂತಾ ಗೊತ್ತಾಗ್ತಿದ್ದಂತೆಯೇ ನೇಣಿಗೆ ಶರಣಾದ ನವವಧು!

ಎರಡನೇ ಪತ್ನಿ ಅಂತಾ ಗೊತ್ತಾಗ್ತಿದ್ದಂತೆಯೇ ನೇಣಿಗೆ ಶರಣಾದ ನವವಧು!
ಬೆಂಗಳೂರು , ಶುಕ್ರವಾರ, 30 ಸೆಪ್ಟಂಬರ್ 2022 (09:28 IST)
ಬೆಂಗಳೂರು : ಮದುವೆ ಅನ್ನೋದು ಒಂದು ಮಧುರ ಅನುಬಂಧ. ಅಲ್ಲದೆ ಇದು ಜೀವನದ ಒಂದು ಮುಖ್ಯವಾದ ಘಟ್ಟವೂ ಹೌದು. ಆದರೆ ಇತ್ತೀಚಿನ ದಿನಗಳಲ್ಲಿ ಮದುವೆ ನೆಪದಲ್ಲಿ ಹಲವು ಚಿತ್ರ-ವಿಚಿತ್ರ ಘಟನೆಗಳು ನಡೆಯುತ್ತವೆ.

ಅಂತೆಯೇ ಸಿಲಿಕಾನ್ ಸಿಟಿಯಲ್ಲಿ ಮದುವೆಯಾದ ಕೆಲವೇ ದಿನಗಳಲ್ಲಿ ಪತಿಗೆ ತಾನು ಎರಡನೇ ಪತ್ನಿ ಎಂದು ಗೊತ್ತಾಗಿ ನವವಧು ನೇಣಿಗೆ ಕೊರಳೊಡ್ಡಿದ್ದಾಳೆ.

ಈ ಘಟನೆ ಬೆಂಗಳೂರಿನ ಮಾತರಹಳ್ಳಿಯ ಕಾವೇರಿ ಲೇಔಟ್ ನಲ್ಲಿ ನಡೆದಿದೆ. ನವಧುವನ್ನು ಗೌತಮಿ (24) ಎಂದು ಗುರುತಿಸಲಾಗಿದೆ. ಮಂಗಳವಾರ ಮುಂಜಾನೆ 4 ಗಂಟೆಯ ಒಳಗಡೆ ಗೌತಮಿ ಫ್ಯಾನ್ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಗಾಢನಿದ್ರೆಯಲ್ಲಿದ್ದ ಪತಿ ಪ್ರಸಾದ್ ರೆಡ್ಡಿ ಬೆಳಗ್ಗಿನ ಜಾವ ಕಣ್ಣು ಬಿಟ್ಟಾಗ ಗೌತಮಿ ಫ್ಯಾನಿನಲ್ಲಿ ನೇತಾಡುತ್ತಿರುವುದು ಕಂಡುಬಂದಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಮತ್ತೆ ಮೊದಲ ಸ್ಥಾನ ಪಡೆದುಕೊಂಡ ಬೆಂಗಳೂರು ವಿಮಾನ ನಿಲ್ದಾಣ