Publish Date: Mon, 26 Sep 2022 (21:03 IST)
Updated Date: Mon, 26 Sep 2022 (21:06 IST)
ಚಿಕ್ಕಬಳ್ಳಾಪುರ ನಗರಸಭಾ ಸದಸ್ಯನ ಕಿರುಕುಳದಿಂದ ಮನನೊಂದು ವ್ಯಕ್ತಿಯೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಚಿಕ್ಕಬಳ್ಳಾಪುರ ನಗರದ 15ನೇ ವಾರ್ಡ್ನಲ್ಲಿ ನಡೆದಿದೆ. 32 ವರ್ಷದ ಪ್ರಶಾಂತ್ ಹಾಗೂ ನಗರಸಭಾ ಸದಸ್ಯ ಅಂಬರೀಶ್ ಮಧ್ಯೆ ವಿವಾಹಿತ ಮಹಿಳೆಯ ಜೊತೆ ಅನೈತಿಕ ಸಂಬಂಧ ವಿಚಾರದಲ್ಲಿ ಮನಸ್ತಾಪವಿತ್ತು. ಇದರಿಂದ ಮನನೊಂದು ಪ್ರಶಾಂತ್ ತನ್ನ ಸಾವಿಗೆ ನಗರಸಭಾ ಸದಸ್ಯ ಅಂಬರೀಶ್ ಕಾರಣವೆಂದು ವಾಟ್ಸಪ್ನಲ್ಲಿ ವಿಡಿಯೋ ಸ್ಟೇಟಸ್ ಹಾಕಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಸಂಬಂಧ ಚಿಕ್ಕಬಳ್ಳಾಪುರ ನಗರ ಠಾಣೆಯಲ್ಲಿ ದೂರು ದಾಖಲಾಗಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.