Publish Date: Sun, 25 Sep 2022 (15:41 IST)
Updated Date: Sun, 25 Sep 2022 (14:43 IST)
ಮದುವೆ ಆಹ್ವಾನ ಪತ್ರಿಕೆ ನೀಡುವ ನೆಪದಲ್ಲಿ ದರೋಡೆ ನಡೆಸಿದ್ದು, ಕಳ್ಳರು 43 ಲಕ್ಷ ಹಣ, ಆಭರಣ ದೋಚಿರುವ ಘಟನೆ ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನಲ್ಲಿ ನಡೆದಿದೆ.
ಸಂಪಂಗೆರೆ ಗ್ರಾಮದ ಮಂಜುನಾಥ್ ಮನೆಯಲ್ಲಿ ದರೋಡೆ ನಡೆಸಲಾಗಿದೆ.
ಕಳೆದ ರಾತ್ರಿ ಮನೆಯಲ್ಲಿ ಮಂಜುನಾಥ್ ಪತ್ನಿ ಮಮತಾ ಮಾತ್ರ ಇದ್ದರು, ಮದುವೆ ಕಾರ್ಡ್ ಕೊಡೋ ನೆಪದಲ್ಲಿ ಕಳ್ಳರ ಎಂಟ್ರಿ ಕೊಟ್ಟಿದ್ಧಾರೆ. ಮಮತಾಗೆ ಪ್ರಜ್ಞೆ ತಪ್ಪುವ ಸ್ಪ್ರೇ ಮಾಡಿ ಹಣ, ಒಡವೆ ಲೂಟಿ ಮಾಡಿದ್ಧಾರೆ. ಇತ್ತೀಚೆಗಷ್ಟೆ ಮಂಜುನಾಥ್ ಜಮೀನು ಮಾರಾಟ ಮಾಡಿದ್ದರು. ಕಳ್ಳರು 250 ಗ್ರಾಂ ಚಿನ್ನಾಭರಣ ದೋಚಿ ಪರಾರಿಯಾಗಿದ್ಧಾರೆ. ಮಾಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.