Webdunia - Bharat's app for daily news and videos

Install App

Select Your Language

Notifications

webdunia
webdunia
webdunia
webdunia

ನಾಲಪಡ್ ಗೆ ರೈತನ ಖಡಕ್ ಎಚ್ಚರಿಕೆ..!!!

webdunia
ಭಾನುವಾರ, 25 ಸೆಪ್ಟಂಬರ್ 2022 (15:37 IST)
ಬಳ್ಳಾರಿ ತಾಲೂಕಿನ ಶ್ರೀಧರಗಡ್ಡೆ ಗ್ರಾಮದಲ್ಲಿ ಯುವ ಕಾಂಗ್ರೆಸ್​ನಿಂದ ನಿನ್ನೆ (ಸೆ.24) ರಾತ್ರಿ ರೈತ ಸಂವಾದ ಕಾರ್ಯಕ್ರಮ ಆಯೋಜಿಸಲಾಗಿತ್ತು.
ನಲಪಾಡ್​ ಅವರು ರೈತರನ್ನು ಉದ್ದೇಶಿಸಿ ಮಾತನಾಡುತ್ತಾ ಬಿಜೆಪಿ ಸರ್ಕಾರದ ಮೇಲೆ 40 ಪರ್ಸೆಂಟ್ ಕಮಿಷನ್​ ಆರೋಪ ಮಾಡಿದರು. ಈ ವೇಳೆ ರೈತನೊಬ್ಬ ಮಧ್ಯ ಪ್ರವೇಶಿಸಿ, ವಿರೋಧಿಸಲು ಮುಂದಾದಾಗ, ಆತನಿಗೆ ಪ್ರತಿಕ್ರಿಯೆ ನೀಡುವ ಭರದಲ್ಲಿ ಏಕವಚನದಲ್ಲಿ ಮಾತನಾಡಿ ಎಡವಟ್ಟು ಮಾಡಿಕೊಂಡಿದ್ದಾರೆ.
 
ವಿವರಣೆಗೆ ಬರುವುದಾದರೆ, ಬಿಜೆಪಿ ಸರ್ಕಾರ 40 ಪರ್ಸೆಂಟ್​ ಕಮಿಷನ್​ ಪಡೆಯುತ್ತಿದೆ ಎಂದು ನಾವು ಹೇಳಿದ್ದಲ್ಲ. ಗುತ್ತಿಗೆದಾರರ ಸಂಘದ ರಾಜ್ಯಾಧ್ಯಕ್ಷ ಕೆಂಪಣ್ಣ ಅವರೇ ಸರ್ಕಾರದ ವಿರುದ್ಧ ಆರೋಪ ಮಾಡಿದ್ದಾರೆ. ಅಲ್ಲದೆ, ಅವರದೇ ಪಕ್ಷದ ಕಾರ್ಯಕರ್ತ ಸಂತೋಷ್​ ಪಾಟೀಲ್​ ಅವರ ಜೀವ ಹೋಗಿದ್ದು ಕೂಡ ಇವರ 40 ಪರ್ಸೆಂಟ್​ ಕಮಿಷನ್​ನಿಂದ ಎಂದು ನಲಪಾಡ್​ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಸರ್ಕಾರದ ವಿರುದ್ಧ ಆರೋಪ ಮಾಡುವಾಗ ವೇದಿಕೆ ಪಕ್ಕದಲ್ಲಿದ್ದ ರೈತನೊಬ್ಬ ಆಕ್ಷೇಪ ವ್ಯಕ್ತಪಡಿಸುತ್ತಾರೆ. ಇದರಿಂದ ಸಿಟ್ಟಿಗೆದ್ದ ನಲಪಾಡ್​, ಯಾವನೋ ಅವನು ಕುಡಿದು ಬಿಟ್ಟು ಹೇಳುವುದನ್ನು ಕೇಳಿ ನೀವು ಟೆನ್ಸನ್​ ತೆಗೆದುಕೊಳ್ಳಬೇಡಿ. ನಾನು ಹೇಳುವುದನ್ನು ಕೇಳಿ ಎಂದು ನಲಪಾಡ್ ಹೇಳುತ್ತಾರೆ.
 
ನಲಪಾಡ್ ಮಾತಿಗೆ ರೊಚ್ಚಿಗೆದ್ದ ಸಂವಾದದಲ್ಲಿ ಭಾಗಿಯಾಗಿದ್ದ ರೈತ, ಯಾವನೋ-ಗೀವನೋ ಅಂದ್ರೆ ಸರಿಯಿರಲ್ಲ ಎಂದು ಅವಾಜ್ ಹಾಕಿದರು. ಅಲ್ಲಿದ್ದ ಇತರೆ ರೈತರು ಎಷ್ಟೇ ಸಮಾಧಾನ ಪಡಿಸಿದರೂ ರೈತ ಸುಮ್ಮನಾಗದಿದ್ದಾಗ ಪೊಲೀಸರು ಮಧ್ಯ ಪ್ರವೇಶಿಸಿ, ರೈತನ ಸಮಾಧಾನ ಮಾಡಿದರು.

ಸೂಕ್ತ ಸಂಗಾತಿ ಬೇಕಾ? ಕನ್ನಡ ಮ್ಯಾಟ್ರಿಮೊನಿಯಲ್ಲಿ - ನೋಂದಣಿ ಉಚಿತ!
Share this Story:

Follow Webdunia kannada

ಮುಂದಿನ ಸುದ್ದಿ

ಚೀನಾದ ಉನ್ನತ ಭದ್ರತಾ ಅಧಿಕಾರಿಗೆ ಮರಣದಂಡನೆ