Publish Date: Tue, 27 Sep 2022 (09:00 IST)
Updated Date: Tue, 27 Sep 2022 (09:04 IST)
ಚೆನ್ನೈ: ಅಣ್ಣ-ತಮ್ಮ ಸೇರಿಕೊಂಡು ಆಟವಾಡುವಾಗ ಆತ್ಮಹತ್ಯೆ ಅಣಕು ಮಾಡಲು ಹೋಗಿ ಅಣ್ಣ ಸಾವನ್ನಪ್ಪಿದ ಘಟನೆ ತಮಿಳುನಾಡಿನಲ್ಲಿ ನಡೆದಿದೆ.
13 ವರ್ಷದ ಅಣ್ಣ ಕಾರ್ತಿಕ್ ಮತ್ತು 11 ವರ್ಷದ ತಮ್ಮ ರಾಮರಸನ್ ಆತ್ಮಹತ್ಯೆ ಮಾಡಿಕೊಳ್ಳುವ ಸಂದರ್ಭವಿರುವ ಆಟವೊಂದನ್ನು ಆಡುತ್ತಿದ್ದರು.
ಈ ವೇಳೆ ಅಣ್ಣ ಕಾರ್ತಿಕ್ ರೂಂಗೆ ಹೋಗಿ ನೇಣು ಹಾಕಿಕೊಳ್ಳುವುದು ಮತ್ತು ತಮ್ಮ ಹೊರಗಿನಿಂದ ಬಂದು ರಕ್ಷಿಸುವುದೆಂದು ತೀರ್ಮಾನ ಮಾಡಿಕೊಂಡಿದ್ದರು. ಅದರಂತೆ ಅಣ್ಣ ಸ್ಟೂಲ್ ಮೇಲೆ ನಿಂತುಕೊಂಡು ಹಗ್ಗ ಕಟ್ಟಿಕೊಂಡಿದ್ದು, ಸ್ಟೂಲ್ ಜಾರಿ ಬಿದ್ದಿದ್ದರಿಂದ ನಿಜವಾಗಿಯೂ ಉಸಿರುಗಟ್ಟಿ ಸಾವನ್ನಪ್ಪಿದ್ದಾನೆ. ಬಳಿಕ ನೆರೆಹೊರೆಯವರು ಬಂದು ಬಾಗಿಲು ಮುರಿದು ನೋಡಿದಾಗ ಕಾರ್ತಿಕ್ ಸಾವನ್ನಪ್ಪಿದ್ದ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.