Select Your Language

Notifications

webdunia
webdunia
webdunia
webdunia

ಎಷ್ಟೇ ದೊಡ್ಡವರಿದ್ರೂ ತಪಾಸಣೆ ಎಂದ ಸಚಿವ

ಎಷ್ಟೇ ದೊಡ್ಡವರಿದ್ರೂ ತಪಾಸಣೆ ಎಂದ ಸಚಿವ
, ಶುಕ್ರವಾರ, 31 ಮೇ 2019 (17:57 IST)
ಯಾರು ಎಷ್ಟು ದೊಡ್ಡವರಿದ್ದರೂ ಪೊಲೀಸರ ತಪಾಸಣೆಗೆ ಸಹಕರಿಸಬೇಕು. ಯಾರೂ ಪ್ರತಿಷ್ಠೆ ಮಾಡಿಕೊಳ್ಳಬಾರದು. ಹೀಗಂತ ಗೃಹ ಸಚಿವ ಹೇಳಿದ್ದಾರೆ.

ಬೆಂಗಳೂರು ರೈಲ್ವೆ ಸ್ಟೇಷನಲ್ಲಿ ಸಿಸಿ ಟಿವಿ ಕಾರ್ಯ ನಿರ್ವಹಿಸದಿರುವ ಬಗ್ಗೆ ಪರಿಶೀಲನೆ ನಡೆಸಲಾಗುವುದು. ನಿರ್ಭಯ ಫಂಡನ್ನು ಸರಿಯಾಗಿ ಬಳಕೆ ಮಾಡಿಕೊಳ್ಳಲು ತೀರ್ಮಾನ ಮಾಡಿದ್ದೇವೆ. ಔರಾದ್ಕರ್ ವರದಿ ಅನುಷ್ಠಾನ ಮಾಡುವ ಬಗ್ಗೆ ಸಿಎಂ ಜೊತೆ ಚರ್ಚಿಸಲು ನಿರ್ಧರಿಸಿದ್ದೇವೆ. ಒಂದು ವಾರದಲ್ಲಿ ಸಿಎಂ ಜೊತೆ ಸಭೆ ಮಾಡಿ ಚರ್ಚೆ ಮಾಡುತ್ತೇವೆ. ಹೊಯ್ಸಳ ವ್ಯವಸ್ಥೆಯನ್ನು ಆಧುನಿಕರಣಗೊಳಿಸಲ  ಯೋಜನೆ ರೂಪಿಸಲಾಗುತ್ತಿದೆ ಎಂದರು.

ಸೈಬರ್ ಕ್ರೈಮ್ ವಿಭಾಗವನ್ನು ಕೇಂದ್ರ ಸರ್ಕಾರದ ಸಹಕಾರದಲ್ಲಿ ಬಲಗೊಳಿಸಲು ಯೋಜಿಸಿದ್ದೇವೆ. ಪೊಲೀಸ್ ಇಲಾಖೆಯಲ್ಲಿ ಇಬ್ಬರು ಇನ್ಸ್‌ಪೆಕ್ಟರ್ ಗಳನ್ನು ನೇಮಕ ಮಾಡಲು ತೀರ್ಮಾನ ಮಾಡಲಾಗಿದೆ ಎಂದರು.

ಇಲಾಖೆ ಆಧುನಿಕರಣಕ್ಕೆ ದೇಶದಲ್ಲಿರುವ ಉತ್ತಮ ವ್ಯವಸ್ಥೆಗಳನ್ನು ಅಧ್ಯಯನ ಮಾಡಲಾಗುತ್ತಿದೆ. ಔರಾದಕರ್ ಸಮಿತಿ ಜಾರಿಗೆ ನಾನು ಮನವರಿಕೆ ಮಾಡುತ್ತಿರುವೆ. ಅದನ್ನು ಮುಖ್ಯಮಂತ್ರಿ ಗೆ ಮನವರಿಕೆ ಮಾಡುತ್ತೇವೆ ಎಂದರು.

ಹಣಕಾಸು ಇಲಾಖೆ ಯಾವಾಗಲೂ ಎಲ್ಲದಕ್ಕೂ ಅಡ್ಡಿ ಮಾಡುತ್ತದೆ. ಸಿಎಂ ಹಣಕಾಸು ಸಚಿವರಾಗಿದ್ದಾರೆ  ಅವರಿಗೆ ಕನ್ವಿನ್ಸ್ ಮಾಡುತ್ತೇನೆ ಎಂದರು.


Share this Story:

Follow Webdunia kannada

ಮುಂದಿನ ಸುದ್ದಿ

ಮಂಡ್ಯ ಸೋಲಿನ ಬೆನ್ನಲ್ಲೇ ಸಿ.ಪುಟ್ಟರಂಗಶೆಟ್ಟಿ ವಿರುದ್ಧ ರೈತರು ಗರಂ