Publish Date: Mon, 14 Sep 2020 (22:23 IST)
Updated Date: Mon, 14 Sep 2020 (22:24 IST)
ಡ್ರಗ್ಸ್ ದಂಧೆ ಬಗ್ಗೆ ನೋಡಿ ನೋಡಿ ಸಾಕಾಗಿದೆ ಎಂದು ಮಾಜಿ ಸಚಿವ ಹಾಗೂ ಹಾಲಿ ಶಾಸಕರೊಬ್ಬರು ಹೇಳಿದ್ದಾರೆ.
ಟಿವಿಗಳಲ್ಲಿ ಬೆಳಗ್ಗೆಯಿಂದಲೇ ಡ್ರಗ್ಸ್ ದಂಧೆ ಬಗ್ಗೆ ತೋರಿಸಲಾಗುತ್ತಿದೆ.
ದೇವರ ಮುಖ ನೋಡೋದನ್ನು ಮರೆತು ಡ್ರಗ್ಸ್ ದಂಧೆ ಬಗ್ಗೆಯೇ ನೋಡೋದಾಗಿದೆ ಎಂದು ಮಾಜಿ ಸಚಿವ ಹಾಗೂ ಹಾಲಿ ಶಾಸಕ ಹೆಚ್.ಡಿ.ರೇವಣ್ಣ ಅಸಮಧಾನ ವ್ಯಕ್ತಪಡಿಸಿದ್ದಾರೆ.
ತಪ್ಪು ಮಾಡಿದವರಿಗೆ ಶಿಕ್ಷೆ ಆಗಲೇಬೇಕು ಎಂದಿರುವ ರೇವಣ್ಣ, ರಾಜ್ಯದಲ್ಲಿ ಕೊರೊನಾ ಸೇರಿದಂತೆ ಹಲವು ಜ್ವಲಂತ ಸಮಸ್ಯೆಗಳಿದ್ದು ಅವುಗಳ ಬಗ್ಗೆ ಟಿವಿಗಳಲ್ಲಿ ತೋರಿಸಬೇಕೆಂದು ಹೇಳಿದ್ದಾರೆ.