Publish Date: Tue, 25 Jun 2019 (17:56 IST)
Updated Date: Tue, 25 Jun 2019 (17:59 IST)
ರಾಜ್ಯದ ಶಾಸಕರೊಬ್ಬರು ಮಕ್ಕಳಿಗೆ ಪಾಠ ಮಾಡಿ ಮಾದರಿಯಾಗಿದ್ದಾರೆ.
ಶಿಕ್ಷಕನಾಗಿ ಮಕ್ಕಳಿಗೆ ಪಾಠ ಬೋಧಿಸಿದ್ದಾರೆ ಶಾಸಕ ಪಿ. ರಾಜೀವ. ಶಾಸಕರಿಂದ ಶಾಲಾ ಮಕ್ಕಳಿಗೆ ಪಾಠ ನಡೆದಿದೆ.
ಕುಡಚಿ ಕ್ಷೇತ್ರದ ಶಾಸಕ ಪಿ. ರಾಜೀವ ಅವರಿಂದ ಮಕ್ಕಳಿಗೆ ಪಾಠ ಹೇಳಿಕೊಡಲಾಗಿದೆ. 9 ನೇ ವರ್ಗದ ವಿದ್ಯಾರ್ಥಿಗಳಿಗೆ ವಿಜ್ಞಾನ ಬೋಧಿಸಿದ್ದಾರೆ ಶಾಸಕರು.
ಜೀವಿಗಳ ಉಗಮ ಹಾಗೂ ನಾಗರಿಕತೆ ಬಗ್ಗೆ ಪಾಠ ಮಾಡಿ ಶಾಸಕ ಪಿ. ರಾಜೀವ ಗಮನ ಸೆಳೆದಿದ್ದಾರೆ. ಹಿಡಕಲ್ ಗ್ರಾಮದ ಮನ್ನಿಕೇರಿ ಗ್ರಾಮದ ತೋಟದ ಶಾಲೆಯಲ್ಲಿ ಬೋಧನೆ ಮಾಡಿದ್ದಾರೆ.
ಬೆಳಗಾವಿ ಜಿಲ್ಲೆ ರಾಯಬಾಗ ತಾಲೂಕಿನ ಹಿಡಕಲ್ ಗ್ರಾಮದಲ್ಲಿ ಪಾಠ ಮಾಡಿದ್ದಾರೆ. ಶಾಸಕ ಪಿ. ರಾಜೀವ ಅವರ ಶಿಕ್ಷಣ ಪ್ರೇಮಕ್ಕೆ ಶ್ಲಾಘಣೆ ವ್ಯಕ್ತವಾಗುತ್ತಿದೆ. ಶಾಸಕ ಪಿ. ರಾಜೀವ ಕುಡಚಿ ಮೀಸಲು ಕ್ಷೇತ್ರದ ಬಿಜೆಪಿ ಶಾಸಕರಾಗಿದ್ದಾರೆ.