Publish Date: Mon, 23 Jul 2018 (15:03 IST)
Updated Date: Mon, 23 Jul 2018 (15:08 IST)
ಜೀಪ್ ವೊದರ ಟೈರ್ ಸಿಡಿದ ಪರಿಣಾಮ ಮಿನಿ ವಿಧಾನಸೌಧಕ್ಕೆ ಬೆಂಕಿ ಹೊತ್ತಿಕೊಂಡಿರುವ ಘಟನೆ ನಡೆದಿದೆ. ಕಟ್ಟಡದ ಪಾರ್ಕಿಂಗ್ ನಲ್ಲಿ ಜೀಪ್ ನಿಲ್ಲಿಸಲಾಗಿತ್ತು. ಇದ್ದಕ್ಕಿದ್ದಂತೆ ಟೈರ್ ಸಿಡಿದಿದ್ದರಿಂದ ಭಾರಿ ಪ್ರಮಾಣದಲ್ಲಿ ಬೆಂಕಿ ಕಾಣಿಸಿಕೊಂಡಿತು.
ಮೈಸೂರು ಜಿಲ್ಲೆ ಟಿ.ನರಸೀಪುರ ಪಟ್ಟಣದ ಮಿನಿ ವಿಧಾನ ಸೌಧದಲ್ಲಿ ಘಟನೆ ನಡೆದಿದೆ. ಕಟ್ಟಡದ ಪಾರ್ಕಿಂಗ್ ಮಾಡುವ ಸ್ಥಳದಲ್ಲಿ ನಡೆದ ಘಟನೆ ಇದಾಗಿದೆ.
ಘಟನೆಯಿಂದ ಮಿನಿ ವಿಧಾನ ಸೌಧದ ತಹಸೀಲ್ದಾರ್ ಹಳೆ ಜೀಪು ಹಾಗೂ ಮೂರು ತ್ರಿಚಕ್ರವಾಹನಗಳು ಸುಟ್ಟು ಕರಕಲಾಗಿವೆ. ವಿಷಯ ತಿಳಿಯುತ್ತಿದ್ದಂತೆ ಅಗ್ನಿಶಾಮಕ ದಳದ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸಲು ಯಶಸ್ವಿಯಾಗಿದ್ದು, ಮುಂದಾಗಬಹುದಾಗಿದ್ದ ಭಾರಿ ಅನಾಹುತವನ್ನು ತಪ್ಪಿಸಿದ್ದಾರೆ. ವಿಷಯ ತಿಳಿದ ಸಾವಿರಾರು ಜನರು ಬೆಂಕಿ ಹೊತ್ತಿಕೊಂಡಿರುವುದನ್ನು ನೋಡಲು ಜಮಾಯಿಸಿದ್ದರು.