Select Your Language

Notifications

webdunia
webdunia
webdunia
webdunia

ದಸರಾ ಚಾಲನೆಗೆ ಬರಲಿದ್ದಾರೆ ದೇಶದ ಪ್ರಮುಖ ವ್ಯಕ್ತಿ, ಅದ್ಧೂರಿ ದಸರಾಗೆ ಹೊಸ ಮೆರಗು ಎಂದ ಎಚ್‌ ಕೆ ಪಾಟೀಲ್

ದಸರಾ ಚಾಲನೆಗೆ ಬರಲಿದ್ದಾರೆ ದೇಶದ ಪ್ರಮುಖ ವ್ಯಕ್ತಿ, ಅದ್ಧೂರಿ ದಸರಾಗೆ ಹೊಸ ಮೆರಗು ಎಂದ ಎಚ್‌ ಕೆ ಪಾಟೀಲ್

Sampriya

ಬೆಂಗಳೂರು , ಗುರುವಾರ, 15 ಆಗಸ್ಟ್ 2024 (18:30 IST)
Photo Courtesy X
ಬೆಂಗಳೂರು: ಈ ಬಾರಿಯ ದಸರಾವನ್ನು ಬಹಳ ವಿಜೃಂಭಣೆಯಿಂದ ಹಾಗೂ ಹೊಸತನದೊಂದಿಗೆ ಆಚರಿಸಲು ರಾಜ್ಯ ಸರ್ಕಾರ ಸಕಲ ಸಿದ್ಧತೆಯನ್ನು ನಡೆಸಿಕೊಳ್ಳುತ್ತಿದೆ.

ಇನ್ನೂ ಈ ಬಾರಿಯ ದಸರಾವನ್ನು ದೇಶದ ಪ್ರಮುಖ ವ್ಯಕ್ತಿಯಿಂದ ಉದ್ಘಾಟಿಸಲಾಗುತ್ತದೆ ಎನ್ನುವ ಮೂಲಕ ಸಚಿವ ಎಚ್‌ ಕೆ ಪಾಟೀಲ್ ಅವರು ಕುತೂಹಲ ಹುಟ್ಟಿಸಿದ್ದಾರೆ.

ಇನ್ನೂ ಸಿಎಂ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ದಸರಾ ಪೂರ್ವಭಾವಿ ಸಭೆಯಲ್ಲಿ ಉದ್ಘಾಟಕರ ಬಗ್ಗೆ ಚರ್ಚಿಸಲಾಯಿತು. ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಚ್‌ ಸಿ ಮಹದೇವಪ್ಪ ಅವರು ಕೆಲ ತೀರ್ಮಾನವನ್ನು ಕೈಗೊಳ್ಳುತ್ತಾರೆ ಎಂದಿದ್ದರು.

ಈಗಾಗಲೇ ಉದ್ಘಾಟಕರ ಬಗ್ಗೆ ಎರಡು ಮೂರು ಹೆಸರುಗಳು ಪ್ರಸ್ತಾಪವಾಗಿದೆ. ಈ ಸಂಬಂಧ ಸಿಎಂ ಸಿದ್ದರಾಮಯ್ಯ ಅವರೇ ಉದ್ಘಾಟಕರ ಹೆಸರನ್ನು ಘೋಷಣೆ ಮಾಡುತ್ತಾರೆ ಎಂದರು.

ಹೊಸ ಲುಕ್‌ನಲ್ಲಿ ಈ ಬಾರಿಯ ಮೈಸೂರು ದಸರಾ:

ದಸರಾ ಉತ್ಸವ ಜನರ ಉತ್ಸವ ಆಗಬೇಕು. ಕೊರೊನಾ - ಬರದ ಕಾರಣಕ್ಕೆ ಕಳೆದ ಬಾರಿ ವಿಜೃಂಭಣೆಯಿಂದ ಆಚರಣೆ ಮಾಡಲಾಗಲಿಲ್ಲ, ಆದರೆ ಈ ಬಾರಿಯ ದಸರಾ ಅದ್ಧೂರಿಯಾಗಿ ನಡೆಸೋಣ. ಸ್ಥಳೀಯ ಕಲಾವಿದರಿಗೆ ಹೆಚ್ಚಿನ‌ ಅವಕಾಶ ನೀಡಬೇಕು. ನಮ್ಮ ಕಲಾವಿದರು ಹೆಚ್ಚು ಸಮರ್ಥರಿದ್ದಾರೆ. ಟ್ಯಾಬ್ಲೋಗಳು ಹೆಚ್ಚು ಆಕರ್ಷಕ ಮತ್ತು ಅರ್ಥಪೂರ್ಣವಾಗಿರಬೇಕು. ಕಲೆ, ಸಂಸ್ಕೃತಿ, ಸಾಹಿತ್ಯ, ಕ್ರೀಡೆ, ಆಹಾರ, ವಸ್ತು ಪ್ರದರ್ಶನ, ಕುಸ್ತಿ ಪ್ರದರ್ಶನ, ದೀಪಾಂಲಕಾರ ಸೇರಿ ಪ್ರತಿಯೊಂದೂ ಆಕರ್ಷಣೀಯ ಮತ್ತು ಅರ್ಥಪೂರ್ಣ ಆಗಿರಬೇಕು ಎಂದು ಸಿಎಂ ಸಿದ್ದರಾಮಯ್ಯ ಅವರು ಹೇಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಮತ್ತೇ ಸಣ್ಣತನ ಪ್ರದರ್ಶಿಸಿದ ಮೋದಿ ಸರ್ಕಾರ: ಐದನೇ ಸಾಲಿನಲ್ಲಿ ರಾಹುಲ್‌ಗಾಂಧಿಗೆ ಆಸನ ವ್ಯವಸ್ಥೆಗೆ 'ಕೈ' ಆಕ್ರೋಶ