Select Your Language

Notifications

webdunia
webdunia
webdunia
webdunia

ಶುರುವಾಯ್ತು ಪಠ್ಯ ಪರಿಷ್ಕರಣೆ ಗುಮ್ಮ

webdunia
bangalore , ಗುರುವಾರ, 25 ಮೇ 2023 (17:44 IST)
ಬಿಜೆಪಿ ಸರ್ಕಾರದ ಅವಧಿಯಲ್ಲಿ ಶೇ.95 ರಷ್ಟು ಪಠ್ಯ ಪರಿಷ್ಕರಣೆ ಮಾಡಿದ್ರು.ಕಾಂಗ್ರೆಸ್  ಸರ್ಕಾರ ಅಧಿಕಾರಕ್ಕೆ ಬಂದ್ರೆ ಪಠ್ಯ ಪರಿಷ್ಕರಣೆ ಮಾಡುವುದಾಗಿ ಘೋಷಣೆ ಮಾಡಿದೆ.
 
ಪ್ರಾಥಮಿಕ ‌ಮತ್ತು ಪ್ರೌಢಶಾಲಾ ಪಠ್ಯ ಪರಿಷ್ಕರಣೆಯಲ್ಲಿ ಗೊಂದಲ ಉಂಟಾಗಿದೆ.2023-24 ನೇ ಶೈಕ್ಷಣಿಕ ವರ್ಷ ಪ್ರಾರಂಭಕ್ಕೆ ಕೆಲವೇ ದಿನ ಬಾಕಿ ಇದೆ.ಶಾಲೆ ಪ್ರಾರಂಭಕ್ಕೂ‌ ಮುನ್ನವೇ ಪರಿಷ್ಕರಣೆ ಗೊಂದಲ ಶುರುವಾಗಿದೆ.ಈಗಾಗಲೇ  ಖಾಸಗಿ ಶಾಲಾ ರುಪ್ಸಾ ಒಕ್ಕೂಟ ಪಠ್ಯ ಪರಿಷ್ಕರಣೆ ಗೊಂದಲ ಬಗ್ಗೆ ಹಾರಿಸುವಂತೆ ಮನವಿ ಮಾಡಿದೆ.
 
ಬಿಜೆಪಿ ಸರ್ಕಾರದ ಅವಧಿಯಲ್ಲಿ ಕೆಲ ಪಠ್ಯವನ್ನ ಕೈಬಿಡಲಾಗಿತ್ತು.ಇದೀಗ ಮತ್ತೊಮ್ಮೆ ಪರಿಷ್ಕರಣೆ ಮಾಡುವಂತೆ ಸರ್ಕಾರಕ್ಕೆ  ರುಪ್ಸಾ ಅಧ್ಯಕ್ಷ ಲೋಕೇಶ್ ತಾಳಿಕಟ್ಟೆ ಒತ್ತಾಯಿಸಿದ್ದಾರೆ.ಈಗಾಗಲೇ ಶಿಕ್ಷಣ ಇಲಾಖೆ ಪಠ್ಯ ಪರಿಷ್ಕರಣೆ ‌ಮಾಡಿ ಪಠ್ಯಪುಸ್ತಕ ಮುದ್ರಣಗೊಂಡಿದೆ
ಶಾಲೆಗಳಿಗೂ ಸರಬರಾಜು ಮಾಡಲು ಶಿಕ್ಷಣ ಇಲಾಖೆ  ಸಿದ್ಧತೆ ನಡೆಸಿದೆ.ರಾಜ್ಯದಲ್ಲಿ 72 ಸಾವಿರಕ್ಕೂ ಹೆಚ್ಚು ಸರ್ಕಾರಿ ಹಾಗೂ ಖಾಸಗಿ ಅನುದಾನಿತ ಶಾಲೆಗಳಿವೆ.1 ಕೋಟಿಗೂ ಹೆಚ್ಚು ಮಕ್ಕಳು ಇದ್ದಾರೆ.ಈಗಾಗಲೇ ಶಿಕ್ಷಣ ಇಲಾಖೆ ಮುದ್ರಣಕ್ಕೆ 262 ಕೋಟಿ ರೂಪಾಯಿ ಖರ್ಚು ಮಾಡಿದೆ.ಮತ್ತೆ ಪಠ್ಯಪರಿಷ್ಕರಣೆ ಮಾಡೋದು ಕಷ್ಟ ಸಾಧ್ಯವಾಗಿದೆ.ಕಳೆದ ವರ್ಷ ಪಠ್ಯ ಪರಿಷ್ಕರಣೆ ಸಮಿತಿ ಅಧ್ಯಕ್ಷರಾಗಿದ್ದ ರೋಹಿತ್ ಚಕ್ರತೀರ್ಥ ಸಮಿತಿ ನಡೆಸಿದ್ದ ಪರಿಷ್ಕರಣೆ ವಿವಾದವಾಗಿತ್ತು.ಕೆಲ ಪಠ್ಯಗಳನ್ನ ಸಮಿತಿ ಕೈಬಿಡಲಾಗಿತ್ತು.ಮತ್ತೆ ಕೈ ಬಿಟ್ಟ ಪಠ್ಯಗಳಿಗೆ ಕಾಂಗ್ರೆಸ್ ಸರ್ಕಾರ ಜೀವ ತುಂಬುವ ಸಾಧ್ಯತೆ ಇದೆ ಎಂದು ರುಪ್ಸಾ ಅಧ್ಯಕ್ಷ ಲೋಕೇಶ್ ತಾಳಿಕಟ್ಟೆ ಹೇಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಬೆಳ್ಳಂದೂರು ಬಳಿಕ ಈಗ ಕೆಂಗೇರಿ ಹೊಸಕೆರೆಯಲ್ಲೂ ನೊರೆಯ ಕಾಟ