Select Your Language

Notifications

webdunia
webdunia
webdunia
webdunia

ಬಹುನಿರೀಕ್ಷಿತ ಹಳದಿ ಮಾರ್ಗವು ಈ ವರ್ಷದ ಡಿಸೆಂಬರ್ ನಲ್ಲಿ ಕಾರ್ಯಾಚರಣೆ

ಬಹುನಿರೀಕ್ಷಿತ ಹಳದಿ ಮಾರ್ಗವು  ಈ ವರ್ಷದ ಡಿಸೆಂಬರ್ ನಲ್ಲಿ  ಕಾರ್ಯಾಚರಣೆ
bangalore , ಗುರುವಾರ, 25 ಮೇ 2023 (15:20 IST)
ಬೆಂಗಳೂರು ಮೆಟ್ರೋದ ಬಹುನಿರೀಕ್ಷಿತ ಹಳದಿ ಮಾರ್ಗವು  ಈ ವರ್ಷದ ಡಿಸೆಂಬರ್ನಲ್ಲಿ ತನ್ನ ಕಾರ್ಯಾಚರಣೆಯನ್ನು ಪ್ರಾರಂಭಿಸಲಿದೆ ಎಂದು BMRCL ತಿಳಿಸಿದೆ. ಈ ಮೊದಲು, ಮೆಟ್ರೋ ಪ್ರಾಧಿಕಾರವು ಎರಡು ಹಂತಗಳಲ್ಲಿ ಹಳದಿ ಮಾರ್ಗವನ್ನು ತೆರೆಯಲು ನಿರ್ಧರಿಸಿತ್ತು. ಅಂದರೆ, ಮೊದಲ ಹಂತದಲ್ಲಿ ಇದೇ ಜೂನ್ ತಿಂಗಳಲ್ಲಿ ಬೊಮ್ಮಸಂದ್ರದಿಂದ ಸಿಲ್ಕ್ಬೋರ್ಡ್ವರೆಗೆ ಮತ್ತು ಡಿಸೆಂಬರ್ ತಿಂಗಳಲ್ಲಿ ಎರಡನೇ ಹಂತದಲ್ಲಿ ಸೆಂಟ್ರಲ್ ಸಿಲ್ಕ್ ಬೋರ್ಡ್ನಿಂದ ಆರ್ವಿ ರಸ್ತೆಯವರೆಗಿನ ಮೆಟ್ರೋ ಕಾರ್ಯಾಚರಣೆ ಆರಂಭಿಸಲು ಉದ್ದೇಶಿಸಿತ್ತು. ಆದರೆ, ಈ ರೀತಿ ಎರಡು ಹಂತದಲ್ಲಿ ತೆರೆಯುವುದರಿಂದ ಹೆಚ್ಚು ಪ್ರಯಾಣಿಕರನ್ನು ಸೆಳೆಯುವುದು ಕಷ್ಟವೆಂದು ತಿಳಿದು ಒಂದೇ ಹಂತದಲ್ಲಿ ಪೂರ್ಣಗೊಳಿಸಲು ಉದ್ದೇಶಿಸಲಾಗಿದ್ದು, , ಹಳದಿ ಮಾರ್ಗವು ಬಿಟಿಎಂ ಲೇಔಟ್, ಬೊಮ್ಮನಹಳ್ಳಿ, ಸೆಂಟ್ರಲ್ ಸಿಲ್ಕ್ ಬೋರ್ಡ್ ಮತ್ತು ಎಲೆಕ್ಟ್ರಾನಿಕ್ಸ್ ಸಿಟಿಯ ಜನನಿಬಿಡ ಪ್ರದೇಶಗಳ ಮೂಲಕ ಹಾದುಹೋಗುತ್ತದೆ. ಇಲ್ಲಿನ ಸಂಚಾರ ದಟ್ಟಣೆ ಕಡಿಮೆ ಮಾಡಲು ಹಳದಿ ಮಾರ್ಗ ನೆರವಾಗಲಿದೆ. ಈ ಮಾರ್ಗ ಬೆಂಗಳೂರಿನ ಮೊದಲ ಡಬಲ್ ಡೆಕ್ಕರ್ ಮೇಲ್ಸೇತುವೆಯನ್ನು ಸಹ ಒಳಗೊಂಡಿರುತ್ತದೆ. ಅಲ್ಲಿ ಎರಡು ಹಂತದ ಸೇತುವೆಯು ರಾಗಿಗುಡ್ಡದಿಂದ ಸಿಲ್ಕ್ ಬೋರ್ಡ್ ಜಂಕ್ಷನ್ವರೆಗೆ 3.3 ಕಿಮೀವರೆಗೆ ಇರುತ್ತದೆ. ಇದರಿಂದ ಜನ ಸಾಮಾನ್ಯರಿಗೆ ಅನುಕೂಲ ವಾಗಲಿದೆ ,ಅಂತ  ಬಿಎಂಆರ್ಸಿಎಲ್ ಎಂ ಡಿ ತಿಳಿಸಿದ್ರು,

Share this Story:

Follow Webdunia kannada

ಮುಂದಿನ ಸುದ್ದಿ

ಬೆಂಗಳೂರಿನ ಮಳೆಗೆ 540ಕ್ಕೂ ಹೆಚ್ಚು ವಿದ್ಯುತ್ ಕಂಬಗಳು ಧರೆಗೆ