Select Your Language

Notifications

webdunia
webdunia
webdunia
webdunia

30ಕ್ಕೂ ಅಧಿಕ ಪ್ರಯಾಣಿಕರನ್ನು ಹೊತ್ತೊಯ್ತಿದ್ದ ಬಸ್ ಪಲ್ಟಿ : 7 ಮಂದಿ ಗಂಭೀರ

30ಕ್ಕೂ ಅಧಿಕ ಪ್ರಯಾಣಿಕರನ್ನು ಹೊತ್ತೊಯ್ತಿದ್ದ ಬಸ್ ಪಲ್ಟಿ : 7 ಮಂದಿ ಗಂಭೀರ
ಬೆಳಗಾವಿ , ಗುರುವಾರ, 25 ಮೇ 2023 (11:21 IST)
ಬೆಳಗಾವಿ : ಧಾರವಾಡದಿಂದ ಜಮಖಂಡಿ ಹೋಗುತ್ತಿದ್ದ ಜಮಖಂಡಿ ಡಿಪೋಗೆ ಸೇರಿದ ಕೆಎಸ್ಆರ್ ಟಿಸಿ ಬಸ್ ಪಲ್ಟಿ ಆಗಿ 7ಜನ ಪ್ರಯಾಣಿಕರಿಗೆ ಗಂಭೀರ ಗಾಯವಾಗಿರುವ ಘಟನೆ ನಡೆದಿದೆ.

ಬೆಳಗಾವಿಯ ರಾಮದುರ್ಗ ತಾಲೂಕಿನ ಮುಳ್ಳೂರ ಘಾಟ್ನಲ್ಲಿ ಬಸ್ ಅಪಘಾತ ಆಗಿದ್ದು, ಅಪಘಾತದಲ್ಲಿ 7 ಜನರಿಗೆ ಗಂಭೀರವಾದ ಗಾಯಗಳಾಗಿದೆ. ಗಾಯಾಳುಗಳನ್ನು ರಾಮದುರ್ಗ ತಾಲೂಕು ಆಸ್ಪತ್ರೆಗೆ ರವಾನಿಸಲಾಗಿದೆ. 
 
ಧಾರವಾಡದಿಂದ ಜಮಖಂಡಿಗೆ ಹೊರಟಿದ್ದ ಬಸ್ 30ಕ್ಕೂ ಅಧಿಕ ಪ್ರಯಾಣಿಕರನ್ನು ಹೊತ್ತೊಯ್ಯುತ್ತಿತ್ತು. ಈ ವೇಳೆ ಚಾಲಕನ ನಿಯಂತ್ರಣ ತಪ್ಪಿದ ಬಸ್ ರಾಮದುರ್ಗ ತಾಲೂಕಿನ ಮುಳ್ಳೂರು ಘಾಟನಲ್ಲಿ ಪಲ್ಟಿ ಆಗಿದೆ. ಈ ವೇಳೆ ಪ್ರಾಣಾಪಾಯಕ್ಕೆ ಸಿಲುಕಿದ್ದ ಪ್ರಯಾಣಿಕರನ್ನು ಸ್ಥಳೀಯರು ರಕ್ಷಣೆ ಮಾಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಇಂದಿರಾ ಕ್ಯಾಂಟಿನ್ಗೆ ಮರುಜೀವ : 5 ರೂ. ನಿಂದ 10 ರೂ.ಗೆ ತಿಂಡಿ ದರ ಏರಿಕೆ