Select Your Language

Notifications

webdunia
webdunia
webdunia
webdunia

ದೆಹಲಿ ಮಾದರಿಯಲ್ಲಿ ಅಂಡರ್ ಪಾಸ್ ನಿರ್ಮಾಣಕ್ಕೆ ಪಾಲಿಕೆ ಸಜ್ಜು,,!

The corporation is ready to build an underpass on the model of Delhi
bangalore , ಗುರುವಾರ, 25 ಮೇ 2023 (15:01 IST)
ಎರಡು ದಿನಗಳ ಹಿಂದೆ ಸುರಿದ ಮಳೆ ಅವಾಂತಕ್ಕೆ ಕಾರಣವಾದ  ಕೆ.ಆರ್.ಸರ್ಕಲ್ನ ಘಟನೆ ಬೆನ್ನಲ್ಲೆ ನಗರದ ಎಲ್ಲಾ ಅಂಡರ್ ಪಾಸ್ಗಳಲ್ಲಿ ಸುರಕ್ಷತೆ ಪರಿಶೀಲಿಸಿ, ಅಪಾಯಕಾರಿ ಅಂಡರ್ ಪಾಸ್ಗಳನ್ನು ದುರಸ್ತಿ ಪಡಿಸುವವರೆಗೆ ಬಂದ್ ಮಾಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಬಿಎಂಪಿಗೆ ಸೂಚಿಸಿದ್ರು, ಈ ನಡುವೇ ಬಿಬಿಎಂಪಿ ನಗರದ ಎಲ್ಲಾ ಅಂಡರ್ ಪಾಸ್ ಗಳಿಗೆ ಹೊಸ ಸ್ವರೂಪ ಕೊಡೋದಕ್ಕೆ ಮುಂದಾಗಿದೆ, ಸುರಿದ ಭಾರಿ ಮಳೆ  ಹಿನ್ನೆಲೆಯಲ್ಲಿ  ಬಿಬಿಎಂಪಿ ಮುಖ್ಯ ಆಯುಕ್ತ ಹಾಗೂ ನಗರ ಪೊಲೀಸ್ ಆಯುಕ್ತರೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ತುರ್ತು ಸಭೆ ನಡೆಸಿದ ಅವರು, ನಗರದಲ್ಲಿರುವ ಎಲ್ಲಾ ಅಂಡರ್ ಪಾಸ್ಗಳಲ್ಲಿ ಸುರಕ್ಷತೆಯನ್ನು ಪರಿಶೀಲನೆ ಮಾಡಬೇಕು. ಮಳೆ ನೀರು ತುಂಬಿಕೊಳ್ಳುವ ಸಾಧ್ಯತೆ ಇರುವ ಅಂಡರ್ ಪಾಸ್ಗಳಲ್ಲಿ ನೀರು ನಿಲ್ಲದಂತೆ ವ್ಯವಸ್ಥೆ ಮಾಡುವವರೆಗೆ ಬಂದ್ ಮಾಡುವಂತೆ ನಿರ್ದೇಶಿಸಿದ್ದಾರೆ. ಅಲ್ಲದೇ, ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಕೊಂಡು ಹೊಸ ತಂತ್ರಜ್ಱನ ಅಳವಡಿಸಿ ಅಂತ ಸೂಚಿಸಿದ್ರು.

ನಗರದ ಅಂಡರ್ ಪಾಸ್ಗಳ ಪರಿಶೀಲನೆಗೆ ಮುಖ್ಯಮಂತ್ರಿ ಸೂಚನೆ ನೀಡುತ್ತಿದಂತೆ ಅಧಿಕಾರಿಗಳೊಂದಿಗೆ ಸಭೆ ನಡೆಸಿರುವ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್, ದೆಹಲಿ ಮಾದರಿಯಲ್ಲಿ ಮಳೆ ನೀರು ಅಂಡರ್ ಪಾಸ್ ಸೇರದಂತೆ ಕ್ರಮ ಕೈಗೊಳ್ಳುವುದಕ್ಕೆ ನಿರ್ದೇಶಿಸಿದ್ದಾರೆ. ನಗರದಲ್ಲಿ 53 ಅಂಡರ್ ಪಾಸ್ಗಳಿದ್ದು ಅದರಲ್ಲಿ 18 ರೈಲ್ವೇ ಅಂಡರ್ ಪಾಸ್ಗಳು ಇವೆ, ಈ ಅಂಡರ್ ಪಾಸ್ಗಳ ಸುರಕ್ಷತೆಯ ಬಗ್ಗೆ ತ್ವರಿತವಾಗಿ ವರದಿ ನೀಡುವಂತೆ ಬಿಬಿಎಂಪಿ ಎಂಜಿನಿಯರ್ ವಿಭಾಗದ ಮುಖ್ಯಸ್ಥರಿಗೆ ಸೂಚನೆ ನೀಡಿದ್ದಾರೆ. ಜತೆಗೆ, ಅಂಡರ್ ಪಾಸ್ನಲ್ಲಿ  ಮಳೆ ನೀರು ಸರಾಗವಾಗಿ ಹರಿದು ಹೋಗುವುದಕ್ಕೆ ವ್ಯವಸ್ಥೆ ಇದೆಯೇ ಎಂಬುದನ್ನು ಖಚಿತ ಪಡಿಸಿಕೊಳ್ಳಬೇಕು. ಮಳೆ ನೀರು ನಿಂತುಕೊಳ್ಳುವ ಸ್ಥಿತಿ ಇದ್ದರೆ, ನೀರು ಅಂಡರ್ ಪಾಸ್ಗೆ ಹೋಗದಂತೆ ವ್ಯವಸ್ಥೆ ಮಾಡುವುದು. ಜತೆಗೆ, ರಾಷ್ಟ ರಾಜಧಾನಿ ದೆಹಲಿಯಲ್ಲಿ ಅಂಡರ್ ಪಾಸ್ಗಳ ಮಾದರಿಯಲ್ಲಿ ಸಿ.ಸಿ.ಟಿ.ವಿ, ಮತ್ತು ಬೊಂಬೆರಿಯರ್ ಅಳವಡಿಸಿ ಅಭಿವೃದ್ಧಿ ಪಡಿಸಲು ಪಾಲಿಕೆ ಮುಂದಾಗಿದೆ.

ಇನ್ನೂ ,, ಪಾಲಿಕೆ ಎಡವಟ್ಟಿಗೆ ಎರಡು ಅಮಾಯಕ ಜೀವಗಳು ಬಲಿಯಾಗ್ತೀದ್ದಂತೆ ಎಚ್ಚೆತ್ತುಗೊಂಡ ಸರ್ಕಾರ ನಗರದಲ್ಲಿ ಅಂಡರ್ ಪಾಸ್ ನಿರ್ಮಾಣಕ್ಕೆ ದೆಹಲಿ ಮಾಡಲ್ ಫಾಲೋ ಮಾಡಲು ಚಿಂತನೆ ನಡೆಸಿದ್ದು, ಬೆಂಗಳೂರಿನ ಅಂಡರ್ ಪಾಸ್ ಗಳಿಗೆ ಹೈಟೆಕ್ ಟಚ್ ನೀಡೋದಕ್ಕೆ ಮುಂದಾಗಿದೆ, ಅತ್ಯಾದುನಿಕ ತಂತ್ರಜ್ಞಾನ ಅಳವಡಿಸಿಕೊಂಡಿರೋ ಅಂಡರ್ ಪಾಸ್ ಗಳು ರಾಜಧಾನಿ ದೆಹಲಿಯಲ್ಲಿ ಇದೇ, ಎಷ್ಟೇ ದೊಡ್ಡ ಮಳೆ ಬಂದು ನೀರು ನುಗ್ಗಿದ್ರು ನೀರು ಅಂಡರ್ ಪಾಸ್ ನಲ್ಲಿ ಶೇಖರಣೆಯಾಗದೆ ಹರಿದು ಹೋಗುವ ವವಸ್ಥೆ ಮಾಡಿಕೊಂಡು ಹೈಟೆಕ್ ಟಚ್ ನಲ್ಲಿ ಅಂಡರ್ ಪಾಸ್ ನಿರ್ಮಾಣ ಮಾಡಲಾಗಿದೆ, ಅದೆ ರೀತಿಯ  ತಂತ್ರಜ್ಞಾನದ ಮಾದರಿಯಲ್ಲಿಯೇ ನಮ್ಮಲ್ಲಿಯೂ ಅಂಡರ್ ಪಾಸ್ ನಿರ್ಮಾಣ ಮಾಡೊದಕ್ಕೆ ಪಾಲಿಕೆ ಮುಂದಾಗಿದೆ ಅಂತೆ,

ಹೈಟೆಕ್ ಅಂಡರ್ ಪಾಸ್ ಗಳ ವಿಶೇಷತೆಗಳು ಏನು ಅಂತ ನೋಡೋದದ್ರೆ,,,
- ಅಂಡರ್ ಪಾಸ್ ಸುತ್ತಲ್ಲಿನ ಪ್ರದೇಶವನ್ನ ಎತ್ತರಿಸುವುದು
- ಅಂಡರ್ ಪಾಸ್ ಗೆ ಹೊರ ಭಾಗದಿಂದ ಶೇಖರಣೆಯಾಗದಂತೆ ತಡೆ ನಿರ್ಮಾಣ 
- ಅಂಡರ್ ಪಾಸ್ ಗೆ ನುಗ್ಗುವ ನೀರು ಹೀರಿಕೊಳ್ಳಲು ದೊಡ್ಡ ಗಾತ್ರದ ಇಂಗು ಗುಂಡಿ ನಿರ್ಮಾಣ ಮಾಡುವುದು
- ಪ್ರವಾಹದ ರೀತಿ ನೀರು ಸೇರಿಕೊಂಡಾಗ ನೀರು ಹೊರ ಹಾಕಲು ಸ್ವಯಂ ಚಾಲಿತ ಪಂಪ್ ಸೆಟ್ ಅಳವಡಿಕೆ
- ಹೆವಿ ಡ್ಯೂಟಿ ಸಾಮರ್ಥ್ಯದ ಮೋಟಾರ್ ಅಳವಡಿಕೆ
- ಮಳೆಗಾಲದ ಸಮಯದಲ್ಲಿ ಅಂಡರ್ ಪಾಸ್ ನಿಗಾವಹಿಸಲು ಸಿಸಿಟಿವಿ ಅಳವಡಿಕೆ

 ನಗರದ ಅಂಡರ್ ಪಾಸ್ ಗೆ ಬಲಿಯಾದ ಬಳಿಕ ಪಾಲಿಕೆ ಎಚ್ಚರಿಕೆಯ ನಡೆ ಹಿಟ್ಟಿದೆ, ಇತ್ತ ದೆಹಲಿ ಮಾದರಿಯ ಅಂಡರ್ ಪಾಸ್ ನಿರ್ಮಾಣ ಅದ್ರೆ ಮಳೆ ಬಂದ್ರು ತೊಂದ್ರೆ ಅಗಲ್ಲ ಅಂತ ಹೇಳ್ತಿದ್ದು , ಪಾಲಿಕೆಯ ಈ ಪ್ಲಾನ್ ಎಷ್ಷರ ಮಟ್ಟಿಗೆ ಸಕ್ಸಸ್ ಮಾಡ್ತಾರೆ ಅಂತ ಕಾದೂ ನೋಡ್ಬೇಕಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಬೆಂಗಳೂರಿನ ಮಳೆಗೆ 540ಕ್ಕೂ ಹೆಚ್ಚು ವಿದ್ಯುತ್ ಕಂಬಗಳು ಧರೆಗೆ