Select Your Language

Notifications

webdunia
webdunia
webdunia
webdunia

ನನ್ನ ಕ್ಷೇತ್ರದ ಅನುದಾನ ವಾಪಸ್ ಬಂದೇ ಬರುತ್ತೆ- ಮುನಿರತ್ನ

ನನ್ನ ಕ್ಷೇತ್ರದ ಅನುದಾನ ವಾಪಸ್ ಬಂದೇ ಬರುತ್ತೆ- ಮುನಿರತ್ನ
bangalore , ಗುರುವಾರ, 19 ಅಕ್ಟೋಬರ್ 2023 (14:24 IST)
126 ಕೋಟಿ ಅನುದಾನ ವಾಪಸ್ ಪ್ರಕರಣ ಬಗ್ಗೆ‌ ಮುನಿರತ್ನ ಪ್ರತಿಕ್ರಿಯಿಸಿದ್ದು.ನನ್ನ ಕ್ಷೇತ್ರದ ಅನುದಾನ ಬೇರೆ ಕ್ಷೇತ್ರಗಳಿಗೆ ವರ್ಗಾವಣೆ ಮಾಡಲಾಗಿದೆ.ನಮ್ಮ ಅನುದಾನ ಬೇರೆ ಕ್ಷೇತ್ರಗಳಿಗೆ ಹೇಗೆ ಕೊಡ್ತಾರೆ ಅವರು?ಡಿಸಿಎಂ ಅವರು ಕಾಮಗಾರಿಗಳ ಪಟ್ಟಿ ಕೇಳಿದ್ರು, ಅವರು ಕೇಳಿದ ವಿವರ ಸಲ್ಲಿಸಿದ್ದೇನೆ.ನನಗೆ ನಂಬಿಕೆ ಇದೆ, ನನ್ನ ಕ್ಷೇತ್ರದ ಅನುದಾನ ವಾಪಸ್ ಬಂದೇ ಬರುತ್ತೆ, ಅವರು ಅನುದಾನ ಕೊಡದಿದ್ರೆ ಮುಂದೇನು ಮಾಡಬೇಕೆಂದು ತಿಳಿಸ್ತೇನೆ.ಅನುದಾನ ವಾಪಸ್ ಬರದಿದ್ರೆ ಮತ್ತೆ ಪ್ರತಿಭಟನೆನೂ ಮಾಡಲ್ಲ, ಕಾಲೂ ಹಿಡಿಯಲ್ಲ ಎಂದು ಬೆಂಗಳೂರಿನಲ್ಲಿ ಆರ್ ಆರ್ ನಗರ ಕ್ಷೇತ್ರದ ಶಾಸಕ ಮುನಿರತ್ನ ಹೇಳಿದ್ದಾರೆ.
 
ಬೆಳಗಾವಿ ಬಣ ರಾಜಕೀಯ ಭುಗಿಲು ವಿಚಾರವಾಗಿ ಶಾಸಕ ಮುನಿರತ್ನ ಪ್ರತಿಕ್ರಿಯಿಸಿದ್ದು,ಬೆಳಗಾವಿಯಲ್ಲಿ ಮತ್ತೆ ರಾಜಕಾರಣ ಶುರುವಾಗಿದೆ.ಈ ಮೊದಲು ಸಮ್ಮಿಶ್ರ ಸರ್ಕಾರ ಉರುಳಿದ್ದೇ ಬೆಳಗಾವಿ ರಾಜಕಾರಣದಿಂದ ,ಬೆಳಗಾವಿಯಲ್ಲಿ ರಾಜಕಾರಣ ಶುರುವಾದಾಗಲೆಲ್ಲ ಸರ್ಕಾರಗಳಿಗೆ ಗಂಡಾಂತರ ಬರುತ್ತೆ.ಬೆಳಗಾವಿಯಲ್ಲಿ ಶುರುವಾಗಿ ಬೆಂಗಳೂರಿನಲ್ಲಿ ಮುಕ್ತಾಯ ಆಗುತ್ತೆ.ಬೆಳಗಾವಿಯಲ್ಲಿ ಡಿಕೆಶಿಗೆ ಶಾಸಕರು, ಸಚಿವರು ಸ್ವಾಗತ ಕೋರದ ವಿಚಾರ ಮುನಿರತ್ನ ವ್ಯಂಗ್ಯವಾಗಿ ಮಾತನಾಡಿದ್ದಾರೆ.ನನಗೆ ಆಶ್ಚರ್ಯ ಇರೋದು, ಡಿಕೆಶಿ ಅವರನ್ನು ಸ್ವಾಗತಿಸಲು ಲಕ್ಷ್ಮಿ ಹೆಬ್ಬಾಳ್ಕರ್ ಯಾಕೆ ಹೋಗಲಿಲ್ಲ ಅಂತ.ಲಕ್ಷ್ಮಿ ಹೆಬ್ಬಾಳ್ಕರ್ ಡಿಕೆಶಿ ಅವರನ್ನು ಸ್ವಾಗತ ಮಾಡದಿರುವುದು ಎಂಟನೇ ಅದ್ಭುತ.ಸತೀಶ್ ಜಾರಕಿಹೊಳಿ ಹೋಗದೇ ಇರುವುದರಲ್ಲಿ ವಿಶೇಷ ಏನೂ ಇಲ್ಲ ಬಿಡಿ ಎಂದು ಮುನಿರತ್ನ ಹೇಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಆಯುಧ ಪೂಜೆಗೆ ಅರಶಿನ, ಕುಂಕುಮ ಬಳಕೆಗೆ ನಿಷೇಧ ಹೇರಿದ ರಾಜ್ಯ ಸರ್ಕಾರ