Publish Date: Thu, 15 Aug 2019 (16:45 IST)
Updated Date: Thu, 15 Aug 2019 (16:47 IST)
ಅವರಿಬ್ಬರೂ ಒಂದೇ ಕಡೆ ಕೆಲಸ ಮಾಡುತ್ತಿದ್ದರು. ಪರಿಚಯ ಕ್ರಮೇಣ ಸ್ನೇಹಕ್ಕೆ ತಿರುಗಿ ಕೊನೆಗೆ ಪ್ರೀತಿಯಲ್ಲಿ ಮುಳುಗಿದ್ದಾರೆ. ಆಗ ಆಕೆಯ ಖಾಸಗಿ ಕ್ಷಣಗಳ ಫೋಟೋ ತೆಗೆದಿದ್ದ ಭೂಪನಿಗೆ ಇದೀಗ ಇಂಥ ಗತಿ ಬಂದಿದೆ.
ಲವ್ವಿ ಡವ್ವಿ ನಡೆಸುವ ವೇಳೆ ಗೆಳತಿಯ ಅಶ್ಲೀಲ ಫೋಟೊಗಳನ್ನು ತೆಗೆದುಕೊಂಡಿದ್ದಲ್ಲದೇ ಅವುಗಳನ್ನು ಗೆಳತಿಯ ಸಂಬಂಧಿಗಳಿಗೆ ಕಳಿಸಿದ್ದ ಆರೋಪಿಯನ್ನು ಬಂಧನ ಮಾಡಲಾಗಿದೆ.
ಚಿಕ್ಕಬಾಣಸವಾಡಿ ಕಿರಣ್ ಬಂಧಿತನಾದವನು. ಈತ ತನ್ನ ಗೆಳತಿಯ ತನ್ನೊಂದಿಗೆ ಕಳೆದಿದ್ದ ಖಾಸಗಿ ಕ್ಷಣಗಳ ಫೋಟೋಗಳನ್ನು ತೆಗೆದುಕೊಂಡಿದ್ದನು. ಇವರಿಬ್ಬರೂ ಮನಸ್ತಾಪದಿಂದ ದೂರ ಆಗಿದ್ದಾರೆ. ಆಗ ಗೆಳತಿಯ ಕಡೆಯವರಿಗೆ ಆಕೆಯ ಅಶ್ಲೀಲ ಫೋಟೋಗಳನ್ನು ಕಳಿಸಿದ್ದಾನೆ.
ಯುವತಿ ದೂರು ನೀಡುತ್ತಿದ್ದಂತೆಯೇ ಭೂಪ ಅಂದರ್ ಆಗಿದ್ದಾನೆ.