Publish Date: Mon, 12 Aug 2019 (16:46 IST)
Updated Date: Mon, 12 Aug 2019 (16:48 IST)
ಪ್ರಶ್ನೆ: ನನ್ನ ಗೆಳತಿಯೊಂದಿಗೆ ನನ್ನ ಕಾಮದಾಟ ಒಂದೆರಡು ವರ್ಷ ನಡೆದಿದೆ. ಅವರ ಮನೆಯಲ್ಲಿ ನನ್ನ ಜತೆ ಮದುವೆ ಮಾಡಿಕೊಡುವುದಕ್ಕೆ ನಿರಾಕರಿಸಿದ್ದಾರೆ. ನನ್ನ ವಿರುದ್ಧ ಗರಂ ಆದ ಆಕೆಯ ಮನೆಯವರು ಯಾರಿಗೂ ತಿಳಿಯದಂತೆ ನನ್ನ ಪ್ರೇಯಸಿಯನ್ನು ಬೇರೆ ಹುಡುಗನಿಗೆ ಕೊಟ್ಟು ಮದುವೆ ಮಾಡಿಬಿಟ್ರು. ಇದಾಗಿ ಐದು ವರ್ಷಗಳೇ ಕಳೆಯುತ್ತಿವೆ. ಆಕೆಗೆ ಮಗು ಆಗಿಲ್ಲ.
ಹೀಗಾಗಿ ನನ್ನ ನಂಬರ್ ಪಡೆದಿರುವ ಅವಳು ಕರೆ ಮಾಡಿ ನಾನು ನನ್ನ ಗಂಡನನ್ನು ಬಿಡುತ್ತೇನೆ. ನನ್ನ ಮಗುವಿಗೆ ನಿನೇ ತಂದೆಯಾಗು ಅಂತಿದ್ದಾಳೆ. ನನಗೆ ಮದುವೆಯಾಗಿ ಎರಡು ಮಕ್ಕಳಿದ್ದಾರೆ. ಮಾಡೋದೇನು?
ಉತ್ತರ: ನೀವು ಯೌವನದಲ್ಲಿ ಪರಸ್ಪರ ಆಕರ್ಷಣೆಗೆ ಒಳಗಾಗಿ ವಯೋಸಹಜವಾಗಿ ಪ್ರೀತಿ ಮಾಡಿರಬಹುದು. ಅಥವಾ ನಿಮ್ಮದು ನಿಜವಾದ ಪ್ರೀತಿಯೇ ಆಗಿರಬಹುದು. ಆದರೆ ನಿಮ್ಮ ಪ್ರೇಯಸಿಗೆ ನಿಮಗಿಂತ ಐದಾರು ವರ್ಷ ಮೊದಲೇ ಮದುವೆಯಾಗಿದೆ. ನೀವು ಕೂಡ ಮದುವೆಯಾಗಿ ಮುದ್ದಾದ ಮಕ್ಕಳ ತಂದೆಯಾಗಿದ್ದೀರಿ. ಮದುವೆ ಆಗುವುದಕ್ಕೂ ಮೊದಲೇ ಆಕೆ ನಿಮ್ಮನ್ನು ಮನೆಯವರ ವಿರೋಧದ ನಡುವೆಯೂ ಮದುವೆಯಾಗಬಹುದಿತ್ತು. ಆದರೆ ಹಾಗೆ ಮಾಡಿಲ್ಲ. ಕಾರಣ ಏನೇ ಇರಬಹುದು. ಅದು ಈಗ ಬೇಡ. ನಿಮಗೂ ಮಡದಿ, ಮಕ್ಕಳಿದ್ದಾರೆ. ಆಕೆಯ ಗಂಡನ ಕುಡಿತದಿಂದಾಗಿ ಆಕೆ ಮಾನಸಿಕ ಹಾಗೂ ದೈಹಿಕ ಹಿಂಸೆ ಅನುಭವಿಸುತ್ತಿದ್ದಾಳೆ.
ಆಕೆಯ ಗಂಡ ನಿಮ್ಮ ಪ್ರೇಯಸಿಗೆ ಹೊಡೆಯುತ್ತಿದ್ದಾನೆ ಎಂದೆಲ್ಲ ತಿಳಿಸಿದ್ದೀರಿ. ಒಂದು ವೇಳೆ ನಿಮ್ಮ ಮೊದಲಿನ ಪ್ರೇಯಸಿಗೆ ಉತ್ತಮ ಗಂಡ ಸಿಕ್ಕಿದ್ದು, ಶ್ರೀಮಂತನಾಗಿದ್ದರೆ, ಅವಳನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದರೆ ಆಗ ನಿಮ್ಮ ನೆನಪು ಆಗುತ್ತಿತ್ತಾ? ಒಮ್ಮೆ ಯೋಚಿಸಿ. ಮೊದಲಿನ ಪ್ರೀತಿಯನ್ನು ಮರೆತು ಬಿಡಿ. ಇದರಿಂದ ಅನಾಹುತಗಳೇ ಹೆಚ್ಚು. ನಿಮ್ಮ ಪತ್ನಿ, ಮಕ್ಕಳನ್ನು ಚೆನ್ನಾಗಿ ನೋಡಿಕೊಳ್ಳಿ.