ತಂಗಿಗೆ ಮಕ್ಕಳಾಗಿಲ್ಲ ಅಂತ ಅಕ್ಕಾಗೆ ಹೀಗೆ ಮಾಡೋದಾ?

ಶುಕ್ರವಾರ, 9 ಆಗಸ್ಟ್ 2019 (16:59 IST)
ಪ್ರಶ್ನೆ: ಸರ್, ನನ್ನ ಮುಂದಿನ ಭವಿಷ್ಯ ಏನೆಂದು ಯೋಚಿಸಿಕೊಂಡು ಕೊರಗುತ್ತಿದ್ದೇನೆ. ಏಕೆಂದರೆ ನನ್ನ ತಂಗಿಯ ಮದುವೆ 6 ವರ್ಷಗಳ ಹಿಂದೆ ಆಯಿತು. ಆದರೆ ಮದುವೆಯಾಗಿ ಆರು ವರ್ಷಗಳಾದರೂ ತಂಗಿಗೆ ಮಕ್ಕಳಾಗಿಲ್ಲ. ಹೀಗಾಗಿ ಭಾವ ನನ್ನ ಜತೆ ಪ್ರೀತಿ ಮಾಡೋಕೆ ಶುರುಮಾಡಿದ್ರು. ನಾನು ಆರಂಭದಲ್ಲಿ ಇದಕ್ಕೆ ವಿರೋಧ ಮಾಡಿದೆ.

ಆದರೆ ಅವರಡೆಗೆ ನಾನೂ ಕ್ರಮೇಣ ಆಸಕ್ತಿ ಹೊಂದಿ ನಾವಿಬ್ಬರೂ ನಿತ್ಯ ಸೇರೋಕೆ ಶುರುಮಾಡಿದ್ವಿ. ಈಗ ನಾನು ಗರ್ಭಿಣಿಯಾಗಿದ್ದೇನೆ. ಭಾವ ದೇವಸ್ಥಾನವೊಂದರಲ್ಲಿ ನನಗೂ ತಾಳಿ ಕಟ್ಟಿದ್ದಾರೆ. ಒಂದೇ ಮನೆಯಲ್ಲಿ ತಂಗಿಯೊಂದಿಗೆ ಹೇಗೆ ಸಂಸಾರ ಮಾಡಬೇಕು. ತಿಳಿಯದಾಗಿದೆ.

ಉತ್ತರ: ನಿಮ್ಮ ಆಕರ್ಷಣೆ ಹಾಗೂ ಪ್ರೀತಿಗಾಗಿ ನಿಮ್ಮ ಸ್ವಂತ ಸಹೋದರಿಗೆ ನೀವು ಮೋಸ ಮಾಡಿದ್ದೀರಿ. ಮೋಸ ಮಾಡುವಾಗ ಚಿಂತೆ ಮಾಡದ ನೀವು ಈಗ ಅವಳೊಂದಿಗೆ ಅವಳ ಮನೆಯಲ್ಲೇ ಸಂಸಾರ ಮಾಡುವ ಬಯಕೆಯನ್ನು ಏಕೆ ವ್ಯಕ್ತಪಡಿಸುತ್ತಿರುವಿರಿ.

ನಿಮ್ಮ ತಂಗಿಗೆ ಮಕ್ಕಳಾಗದಿರುವ ಬಗ್ಗೆ ತಿಳಿಹೇಳಿ. ಒಟ್ಟಿಗೆ ಕೂಡಿ ಬಾಳಲು ಸಾಧ್ಯವೇ ಆಗದಿದ್ದರೆ ಬೇರೆ ಕಡೆ ವಾಸಿಸಿ. ಆದರೂ ನೈತಿಕವಾಗಿ ಹಾಗೂ ಕಾನೂನು ಪ್ರಕಾರ ನೀವು ಮಾಡಿದ್ದು ತಪ್ಪು. ನಿಮ್ಮ ತಂಗಿಯ ಒಪ್ಪಿಗೆ ಇಲ್ಲದೇ ಹಾಗೂ ಪತ್ನಿ ಜೀವಂತ ಇರೋವಾಗ ನಿಮ್ಮ ಭಾವ ಮತ್ತೊಂದು ಮದುವೆಯಾಗಿರುವುದು ಸರಿಯಲ್ಲ.


ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಫೇಸ್ ಬುಕ್ ಫ್ರೆಂಡ್ ನೊಂದಿಗೆ ಲವ್ವಿ ಡವ್ವಿ