Publish Date: Wed, 07 Aug 2019 (09:10 IST)
Updated Date: Wed, 07 Aug 2019 (09:13 IST)
ಬೆಂಗಳೂರು: ಮೊದಲ ಬಾರಿಗೆ ಹೆಣ್ಣು ಮಕ್ಕಳು ಋತುಮತಿಯಾದಾಗ ಅವರನ್ನು ಯಾವ ರೀತಿ ನೋಡಿಕೊಳ್ಳಬೇಕು, ಆರೈಕೆ ಮಾಡಬೇಕು ಎಂಬ ಬಗ್ಗೆ ಅನೇಕರಿಗೆ ಗೊಂದಲಗಳಿವೆ.
ಮೊದಲ ಬಾರಿಗೆ ಋತುಮತಿಯಾದಾಗ ಹೆಣ್ಣು ಮಕ್ಕಳಿಗೆ ಅನೇಕ ಆತಂಕಗಳಿರುತ್ತವೆ. ಆರಂಭದಲ್ಲಿ ಹೊಟ್ಟೆ ನೋವು, ಋತುಸ್ರಾವದ ಬಗ್ಗೆ ಅವರಿಗೆ ತಿಳಿಹೇಳಬೇಕು. ಒಂದು ವೇಳೆ ಈ ಬಗ್ಗೆ ಅವರಿಗೆ ಮೊದಲೇ ಗೊತ್ತಿದ್ದರೆ ಹೆಚ್ಚಿನ ತಿಳುವಳಿಕೆ ಹೇಳುವ ಅಗತ್ಯವಿಲ್ಲ. ಆದರೆ ಋತುಚಕ್ರದ ಬಗ್ಗೆ ಅನಗತ್ಯ ಆತಂಕಪಡದಂತೆ, ಕಟ್ಟು ಪಾಡಿನ ಮೂಲಕ ಆಕೆಯಲ್ಲಿ ಕೀಳರಿಮೆ ಮೂಡದಂತೆ ಎಚ್ಚರವಹಿಸಬೇಕು.