Webdunia - Bharat's app for daily news and videos

Install App

Select Your Language

Notifications

webdunia
webdunia
webdunia
webdunia

ಹೆಣ್ಣಿನ ಜಾಣತನ ಪ್ರಕೃತಿಕೊಟ್ಟ ವರ ಎಂದವರಾರು?

webdunia
ಶುಕ್ರವಾರ, 17 ಆಗಸ್ಟ್ 2018 (21:35 IST)
ಹೆಣ್ಣಿಗೆ ಬುದ್ಧಿವಂತಿಕೆ, ಜಾಣತನ ಪ್ರಕೃತಿ ಮಾತೆ ಕೊಟ್ಟ ವರವಾಗಿದೆ. ಹೀಗಂತ ಸರಕಾರದ ನಿವೃತ್ತ ಮುಖ್ಯ ಕಾರ್ಯದರ್ಶಿ ಹೇಳಿದ್ದಾರೆ.

ಸಾರ್ವಜನಿಕ ಜೀವನದಲ್ಲಿ ಇರುವವರು ತೊಡುವ ಬಟ್ಟೆಗಳು ಸಮಾಜ ಸ್ವೀಕರಿಸುವಂತೆ ಇರಬೇಕು. ಹೆಣ್ಣಿನ ಬುದ್ಧಿವಂತಿಕೆ ಹಾಗೂ ಜಾಣತನ ವರವಾಗಿದ್ದು ಅವನ್ನು ಮಹಿಳೆ ಹಲವು ಬಾರಿ ರುಜುವಾತುಪಡಿಸಿದ್ದಾಳೆ ಎಂದು ರಾಜ್ಯ ಸರಕಾರದ ನಿವೃತ್ತ ಮುಖ್ಯಕಾರ್ಯದರ್ಶಿ ಕೆ.ರತ್ನಪ್ರಭ ಹೇಳಿದ್ದಾರೆ.

ಕಲಬುರಗಿಯ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಮಾತೋಶ್ರೀ ಗೋದುತಾಯಿ ದೊಡ್ಡಪ್ಪ ಕಲಾ ಮತ್ತು ವಾಣಿಜ್ಯ ಮಹಿಳಾ ಪದವಿ ಮಹಾವಿದ್ಯಾಲಯದಲ್ಲಿ ವಿದ್ಯಾರ್ಥಿ ಸಂಘ ಕಲಾವಾಣಿ ಉದ್ಘಾಟಿಸಿ ಅವರು ಮಾತನಾಡಿದರು.
ಮಹಿಳೆಯರಿಗೆ ತಾರತಮ್ಯ ಮನೆಯಲ್ಲೇ ಪ್ರಾರಂಭವಾಗುತ್ತದೆ. ಪುರುಷರಿಗೆ ಸಿಕ್ಕಷ್ಟು ಪ್ರಾಮುಖ್ಯತೆ ಸಿಗುವುದಿಲ್ಲ. ಹೀಗಾಗಿ ಹಿಂದೆ ಉಳಿಯುತ್ತಿದ್ದಾರೆ. ಉನ್ನತ ಶಿಕ್ಷಣ ಪಡೆಯಲು ಯುವತಿಯರು ಮುಂದೆ ಬರಬೇಕು ಎಂದರು. 

ಸೂಕ್ತ ಸಂಗಾತಿ ಬೇಕಾ? ಕನ್ನಡ ಮ್ಯಾಟ್ರಿಮೊನಿಯಲ್ಲಿ - ನೋಂದಣಿ ಉಚಿತ!
Share this Story:

Follow Webdunia Hindi

ಮುಂದಿನ ಸುದ್ದಿ

ಶಿರಾಡಿ ಘಾಟ್: ಮತ್ತೆ ಸಂಚಾರ ಬಂದ್