Select Your Language

Notifications

webdunia
webdunia
webdunia
webdunia

ಶಿರಾಡಿ ಘಾಟ್: ಮತ್ತೆ ಸಂಚಾರ ಬಂದ್

ಶಿರಾಡಿ ಘಾಟ್
ಭಾರೀ ಪ್ರಮಾಣದಲ್ಲಿ ಮಳೆ ಸುರಿಯುತ್ತಿರುವ ಕಾರಣ ಶಿರಾಡಿ ಘಾಟ್ ನಲ್ಲಿ ನಿರಂತರ ಭೂ ಕುಸಿತ ಉಂಟಾಗುತ್ತಿದೆ. ಮಣ್ಣು ಹಾಗೂ ಕಲ್ಲು ಬಂಡೆ ತೆರವಿಗೆ ಸಮಯ ಬೇಕಾಗಿರುವ ಕಾರಣ ಆ. 25ರವರೆಗೆ ಶಿರಾಡಿ ಘಾಟ್ ರಸ್ತೆ ಸಂಚಾರ ಬಂದ್ ಮಾಡಲು ತೀರ್ಮಾನಿಸಲಾಗಿದೆ.

ಮಂಗಳೂರು ಹಾಗೂ ದಕ್ಷಿಣ ಕನ್ನಡ ಸೇರಿದಂತೆ ಸುತ್ತಲಿನ ಬೆಳ್ತಂಗಡಿ, ಸುಳ್ಯ ಹಾಗೂ ಇನ್ನಿತರ ಕಡೆಗಳಲ್ಲಿ ಧಾರಕಾರ ಮಳೆ ಸುರಿಯುತ್ತಿರುವುದು ಮುಂದುವರಿದಿದೆ. ಭಾರೀ ಮಳೆ ಕಾರಣದಿಂದ ಅಲ್ಲಲ್ಲಿ ಭೂ ಕುಸಿತ ಸಂಭವಿಸುತ್ತಿದೆ. ಶಿರಾಡಿ ಘಾಟ್ ರಸ್ತೆ ಹಾಗೂ ಪ್ರದೇಶದಲ್ಲಿ ಭೂ ಕುಸಿತ ನಿರಂತರವಾಗಿ ಸುದ್ದಿಯಾಗುತ್ತಿದೆ. ಹೀಗಾಗಿ ದುರಸ್ತಿಗೆ ಐದಾರು ದಿನ ಸಮಯ ಬೇಕಾಗಿರುವ ಕಾರಣ ಆ.25ರವರೆಗೆ ಶಿರಾಡಿ ಘಾಟ್ ಸಂಚಾರವನ್ನು ಬಂದ್ ಮಾಡಲು ನಿರ್ಧರಿಸಲಾಗಿದೆ. ದುರಸ್ತಿಗೆ ಕಾಲಾವಕಾಶ ಬೇಕಾಗಿರುವ ಕಾರಣ ರಸ್ತೆ ಸಂಚಾರ ಬಂದ್ ಮಾಡಲಾಗುತ್ತಿದೆ.



Share this Story:

Follow Webdunia kannada

ಮುಂದಿನ ಸುದ್ದಿ

ಅಮಿತ್ ಷಾಗೆ ರಾಹುಲ್ ಗಾಂಧಿ ನೀಡಿದ ಟಾಂಗ್ ಹೇಗಿದೆ ಗೊತ್ತಾ?