Publish Date: Tue, 05 Mar 2019 (19:21 IST)
Updated Date: Tue, 05 Mar 2019 (19:23 IST)
ಕಲಬುರಗಿಯಲ್ಲಿ ಸಂಸದ ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಮಾಜಿ ಸಚಿವ ವಾಗ್ದಾಳಿ ನಡೆಸಿದ್ದಾರೆ.
ಮಾಜಿ ಸಚಿವ ಬಾಬುರಾವ್ ಚಿಂಚನಸೂರ ವಾಗ್ದಾಳಿ ನಡೆಸಿದ್ದು, ಕಲಬುರಗಿ ಜಿಲ್ಲೆ ಕಾಳಗಿ ತಾಲೂಕಿನ ಗೋಟುರ ಗ್ರಾಮದಲ್ಲಿ ಚಿಂಚನಸೂರ ಹೇಳಿಕೆ ನೀಡಿ, ಕೋಲಿ ಸಮಾಜಕ್ಕೆ ನನ್ನ ಕೊಡುಗೆ ಏನೆಂಬುದು ಜನರಿಗೆ ಗೊತ್ತಿದೆ. ಆದರೆ ಕಳೆದ 50 ವರ್ಷದಲ್ಲಿ ಕೋಲಿ ಸಮಾಜಕ್ಕೆ ಏನು ಮಾಡಿದ್ದಾರೆ? ಇದುವರೆಗೆ ಕೋಲಿ ಸಮಾಜವನ್ನ ಎಸ್ಟಿ ಸಮುದಾಯಕ್ಕೆ ಸೇರಿಸಲು ಆಗಲಿಲ್ಲ.
ಎಲೆಕ್ಷನ್ ಬಂದಾಗ ಮಾತ್ರ ಈ ಮಹಾನ್ ನಾಯಕನಿಗೆ ಕೋಲಿ ಸಮಾಜ ನೆನಪಾಗುತ್ತೆ ಎಂದು ಖರ್ಗೆಗೆ ಛೇಡಿಸಿದರು.
ಎಲ್ಲರನ್ನೂ ಕರೆಕರೆದು ಅನುಕಂಪ ಅಲೆ ತಮ್ಮ ಕಡೆ ಸೆಳೆದುಕೊಳ್ಳುತ್ತಿದ್ದಾರೆ ಎಂದ ಅವರು, ಮಲ್ಲಿಕಾರ್ಜುನ ಖರ್ಗೆ ಸೋಲುವತನಕ ಕೋಲಿ ಸಮಾಜ ಅಭಿವೃದ್ಧಿಯಾಗಲ್ಲ ಎಂದು ಹೇಳಿದರು.