Publish Date: Tue, 18 Sep 2018 (16:55 IST)
Updated Date: Tue, 18 Sep 2018 (16:57 IST)
ವಿಧಾನಸಭೆ ಚುನಾವಣೆ ಮುಗಿದು ನಾಲ್ಕು ತಿಂಗಳು ಕಳೆದರೂ ಆ ಶಾಸಕರು ಇನ್ನೂ ಮಾಜಿ ಆಗಿಲ್ಲ....!
ಯಾದಗಿರಿಗೆ ನೂತನ ಶಾಸಕರು ಬಂದರೂ ಮಾಜಿ ಶಾಸಕರ ನಾಮಫಲಕ ಇನ್ನೂ ಬದಲಾಗಿಲ್ಲ. ಯಾದಗಿರಿಯ ಕೆಲವು ಜನರಿಗೆ ಈ ನಾಮಫಲಕ ನೋಡಿ ನಮ್ಮ ಮತ ಕ್ಷೇತ್ರದ ಶಾಸಕರು ಯಾರು ಎಂಬ ಗೊಂದಲವಾಗುತ್ತಿದೆ. ಯಾಕಂದ್ರೆ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಡಾ. ಎ.ಬಿ ಮಾಲಕರೆಡ್ಡಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿ ಸೋಲುಂಡಿದ್ರು.
ಆದರೂ ಕೂಡ ಅವರ ಮನೆ ಮುಂದಿನ ರಸ್ತೆಯಲ್ಲಿ ಹಾಕಿದ ನಾಮಫಲಕದಲ್ಲಿ ಇನ್ನೂ ಶಾಸಕ ಡಾ. ಎ.ಬಿ ಮಾಲಕರೆಡ್ಡಿ ಯಾದಗಿರಿ ಮತ ಕ್ಷೇತ್ರ ಶಾಸಕ ಎಂದಿದೆ. ಇದರಿಂದ ನಗರದ ಜನರಿಗೆ ಗೊಂದಲ ಉಂಟು ಮಾಡುತ್ತಿದೆ. ಈಗಾಗಲೇ ಡಾ.ಎ.ಬಿ ಮಾಲಕರೆಡ್ಡಿ ಯನ್ನು ಸೋಲಿಸಿ ಬಿಜೆಪಿ ಅಭ್ಯರ್ಥಿ ವೆಂಕಟರಡ್ಡಿ ಮುದ್ನಾಳ ಭರ್ಜರಿ ಗೇಲುವು ಸಾಧಿಸಿದ್ದಾರೆ.
ಹೀಗಾಗಿ ಕೆಲವು ಮುಖಂಡರು ಹಾಗೂ ಬಿಜೆಪಿ ಕಾರ್ಯಕರ್ತರು ಇದನ್ನು ಪ್ರಶ್ನೆ ಮಾಡುತ್ತಿದ್ದಾರೆ. ಕೂಡಲೆ ನಾಮಫಲಕವನ್ನು ಬದಲಾಯಿಸುವಂತೆ ಬಿಜೆಪಿ ಕಾರ್ಯಕರ್ತರು ಒತ್ತಾಯಿಸಿದ್ದಾರೆ.