Select Your Language

Notifications

webdunia
webdunia
webdunia
webdunia

ಮೋದಿ ಹವಾ, ಹಿಂದುತ್ವದ ಅಂಜೆಡಾದಿಂದ ಬಿಜೆಪಿ ಗೆಲುವು: ಮದ್ವರಾಜ್

ಮೋದಿ ಹವಾ, ಹಿಂದುತ್ವದ ಅಂಜೆಡಾದಿಂದ ಬಿಜೆಪಿ ಗೆಲುವು: ಮದ್ವರಾಜ್
ಉಡುಪಿ , ಶುಕ್ರವಾರ, 6 ಜುಲೈ 2018 (17:36 IST)
ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ ಮೋದಿ ಹವಾ ಹಾಗೂ ಹಿಂದುತ್ವದ ಅಂಜೆಡಾದಿಂದ ಗೆಲುವು ಸಾಧಿಸಿದೆ ಎಂದು ಮಾಜಿ  ಶಾಸಕ ಪ್ರಮೋದ್ ಮದ್ವರಾಜ್ ಆರೋಪ ಮಾಡಿದ್ದಾರೆ. ಉಡುಪಿಯಲ್ಲಿ ಈ ಬಗ್ಗೆ ಪ್ರತಿಕ್ರಿಯಿಸಿ  ಮಾತನಾಡಿದ್ರು,  ಕರಾವಳಿಯ ಹಾಲಿ ಶಾಸಕರು ಹಿಂದುತ್ವದ ಅಜೆಂಡಾವನ್ನು ಮುಂದಿಟ್ಟು, ಜನರ ಮತವನ್ನು ಪಡೆದುಕೊಂಡಿದ್ದಾರೆ. ಇದೀಗ ವಿಧಾನಸಭಾ ಮುಂದೆ ಕರಾವಳಿಗಾಗಿ  ಬಜೆಟ್‍ನಲ್ಲಿ ಸಿ ಎಂ ಯಾವುದೇ ಯೋಜನೆಗಳನ್ನು  ಘೋಷಣೆ ಮಾಡಿಲ್ಲ ಎಂದು ಪ್ರತಿಭಟನೆಗೆ ಕುಳಿತುಕೊಂಡಿದ್ದಾರೆ.


ಬಜೆಟ್ ಮಂಡನೆಯಾಗುವ 2 ದಿವಸ ಮೊದಲು ಕರಾವಳಿಯ ಶಾಸಕರ ನಿಯೋಗ ಮುಖ್ಯಮಂತ್ರಿಗಳನ್ನು ಭೇಟಿ  ಮಾಡಿ ಕರಾವಳಿಯ ಯೋಜನೆಗಳ ಬೇಡಿಕೆಯ ಪಟ್ಟಿ ಸಲ್ಲಿಕೆ ಮಾಡಿದ್ದಾರೆ. ಬಜೆಟ್ ಮಂಡನೆಗೆ 2 ದಿವಸ ಮೊದಲೇ ಬಜೆಟ್ ಪ್ರತಿಗಳು ಮುದ್ರಣಕ್ಕೆ ಹೋಗುತ್ತೇ. ಕರಾವಳಿಯ  ಶಾಸಕರಿಗೆ ಅಷ್ಟು ಕೂಡಾ ಅಲ್ಪ ಜ್ಞಾನ ಇಲ್ಲವಾಗಿದೆ.


ಬೇಡಿಕೆಯನ್ನು ತಡವಾಗಿ ನೀಡಿ ಕರಾವಳಿಗೆ ಬಜೆಟ್ ನಲ್ಲಿ ಎನೂ  ನೀಡಿಲ್ಲ ಎಂದು ಸಿಎಂ ಮೇಲೆ ಗೂಬೆ ಕೂರಿಸುತ್ತಿದ್ದಾರೆ. ಕಳೆದ ನಾಲ್ಕು ವರ್ಷದಲ್ಲಿ ಕೇಂದ್ರದಲ್ಲಿ ಆಡಳಿತ ನಡೆಸುವ ಬಿಜೆಪಿ ಸರಕಾರ ಉಡುಪಿ ಜಿಲ್ಲೆಗೆ ಎಷ್ಟು ಅನುದಾನ ನೀಡಿದೆ. ಎಂದಾದ್ರೂ ಬಿಜೆಪಿಗರು ದೆಹಲಿಗೆ ತೆರಳಿ ಉಡುಪಿ ಜಿಲ್ಲೆಗೆ ಅನುದಾನ ತರುವ ಪ್ರಯತ್ನ ಮಾಡಿದ್ದಾರೆಯೇ ಎಂದು ಪ್ರೆಶ್ನೆ ಮಾಡಿದ್ರು.





Share this Story:

Follow Webdunia kannada

ಮುಂದಿನ ಸುದ್ದಿ

ಹಾಟ್ ಸ್ಪಾಟಲ್ಲಿ ಸರಣಿ ಕಳ್ಳತನ