Publish Date: Mon, 03 Sep 2018 (14:00 IST)
Updated Date: Mon, 03 Sep 2018 (14:04 IST)
ಕಳೆದ ವಿಧಾನ ಸಭೆ ಚುನಾವಣೆಯಲ್ಲಿ ಸೋಲು ಕಂಡ ಶಾಸಕರು, ತಮ್ಮ ಕಾರಿನ ಮೇಲೆ ಈಗಲೂ ಹಾಲಿ ಶಾಸಕ ಎಂದೇ ಬೋರ್ಡ ಹಾಕಿಕೊಂಡು ಸಂಚರಿಸುತ್ತಿದ್ದಾರೆ. ಇದು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಹಾಲಿ ಶಾಸಕನೆಂದು ವಾಹನಕ್ಕೆ ಬೋರ್ಡ್ ಹಾಕಿರುವ ಮಾಜಿ ಶಾಸಕರ ಕ್ರಮ ಈಗ ಚರ್ಚೆಗೆ ಗ್ರಾಸವಾಗಿದೆ.
ವಿಜಯಪುರ ಜಿಲ್ಲೆಯ ಸಿಂದಗಿ ಕ್ಷೇತ್ರದ ಬಿಜೆಪಿಯ ಮಾಜಿ ಶಾಸಕ ರಮೇಶ್ ಭೂಸನೂರ್ ವಾಹನದ ಮೇಲೆ ಕಂಡು ಬಂದ ಬೋರ್ಡ್ ಇದಾಗಿದೆ.
ಮಾಜಿ ಶಾಸಕ ರಮೇಶ ಭೂಸನೂರ ತಮ್ಮ ಪಾರ್ಚೂನರ್ ವಾಹನದ ಮುಂಬದಿ ಹಾಗೂ ಹಿಂಬದಿ ನಂಬರ್ ಪ್ಲೇಟ್ ಮೇಲೆ ಶಾಸಕನೆಂದು ನಮೂದು ಮಾಡಿದ್ದಾರೆ. ಈ ಹಿಂದೆ ಸಿಂದಗಿ ಕ್ಷೇತ್ರದಿಂದ ಎರಡು ಬಾರಿ ಬಿಜೆಪಿಯಿಂದ ಶಾಸಕನಾಗಿದ್ದ ರಮೇಶ್ ಭೂಸನೂರು, ಈಚೆಗೆ ನಡೆದ ವಿಧಾನಸಭೆ ಚುನಾವಣೆಯಲ್ಲಿ ಪರಾಭವಗೊಂಡಿದ್ದಾರೆ. ಆದರೂ ಅವರಿಗೆ ಸೇರಿದ ಕೆಎ 37 ಪಿ 6955 ನಂಬರಿನ ಪಾರ್ಚ್ಯೂನರ್ ಕಾರ್ ಮೇಲೆ ಶಾಸಕ ಎಂದು ಬೋರ್ಡ ಹಾಕಲಾಗಿದೆ.