Select Your Language

Notifications

webdunia
webdunia
webdunia
webdunia

ನಾಲ್ಕು ದ್ವಾರದಲ್ಲಿ ತಲೆ ಎತ್ತಲಿವೆ ಪ್ರಥಮ ಚಿಕಿತ್ಸಾ ಕೊಠಡಿ ಹಾಗೂ ನಮ್ಮ ಕ್ಲಿನಿಕ್

ನಾಲ್ಕು ದ್ವಾರದಲ್ಲಿ ತಲೆ ಎತ್ತಲಿವೆ ಪ್ರಥಮ ಚಿಕಿತ್ಸಾ ಕೊಠಡಿ ಹಾಗೂ ನಮ್ಮ ಕ್ಲಿನಿಕ್
bangalore , ಶನಿವಾರ, 21 ಜನವರಿ 2023 (18:42 IST)
ಬೆಳಗೆದ್ದು ವಾಕಿಂಗ್ ಮಾಡುವವರು ಈ ಸ್ಟೋರಿ ನೋಡಲೇ ಬೇಕು. ನೋಡಿದ ಮೇಲೆ ಇದರ ಉಪಯೋಗ ನೀವು ಪಡೆದು ಕೊಳ್ಳ ಬಹುದು. ಅದರಲ್ಲೂ ವೃದ್ದರಿಗಂತೂ ಇದರ ಅವಶ್ಯಕತೆ ಸಾಕಷ್ಟಿದೆ.  ಒಂದಿಷ್ಟು ಜನ  ಲವಲವಿಕೆಯಿಂದ ಲಾಲ್ ಬಾಗ್ ನಲ್ಲಿ ಹೂವಿನ ಲೋಕವನ್ನು ನೋಡಿ ಆನಂದಿಸಲು ಜೋಶ್ ನಿಂದಾ ಬರುತ್ತಾರೆ ಇನ್ನೂ ಕೆಲವರು ಮುಂಜಾನೆ ಎದ್ದು ವಾಕಿಂಗ್ ಗೆ ಎಂದು ಬರುತ್ತಾರೆ ಆದ್ರೆ ಬಹಳ ದೊಡ್ಡದಾಗಿರುವ ಲಾಲ ಬಾಗ್ ಅನ್ನ್ನು ಸುತ್ತಿ ಸುಸ್ತಾಗುತ್ತಾರೆ ಇನ್ನು ಕೆಲವರಿಗೆ ಆರೋಗ್ಯದ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಹಾಟ್ ಅಟ್ಯಾಕ್ ಇನ್ನು‌ ಅನೇಕ ಸಮಸ್ಯೆಗಳು ಎದುರಾಗುತ್ತದೆ ಹಾಗಾಗಿ ಲಾಲ್ ಬಾಗ್ ನ ನಾಲ್ಕು ದ್ವಾರಗಳಲ್ಲಿ ಪ್ರಥಮ ಚಿಕಿತ್ಸಾ ಕೊಠಡಿ ಹಾಗೂ ನಮ್ಮ ಕ್ಲಿನಿಕ್‌ ಅನ್ನು ನಿರ್ಮಿಸಲು ಮುಂದಾಗಿದ್ದಾರೆ.

ಕಾಂಕ್ರಿಟ್ ಕಾಡು ಎನ್ನಿಸಿಕೊಂಡಿರುವ ಬೆಂಗಳೂರಿನಲ್ಲಿ ವಾಕಿಂಗ್ ಅಂತ ನಾಗರಿಕರು ಸಸ್ಯಕಾಶಿ ಲಾಲ್ ಬಾಗ್ ಅವಲಂಬಿಸಿದ್ದಾರೆ. ಬೆಳಗ್ಗೆ ಎಂದ್ರೆ ಸಾಕು ಸಾವಿರಾರು ಜನ ಶುದ್ದ ಆಮ್ಲಜನಕಕ್ಕಾಗಿ ಮತ್ತು ಆರೋಗ್ಯದ ವೃದ್ದಿಗಾಗಿ ಇಲ್ಲಿ ವಾಕಿಂಗ್ ಬರ್ತಾರೆ. ಮಕ್ಕಳು, ವೃದ್ದರು, ಅನಾರೋಗ್ಯಕ್ಕೆ ತುತ್ತದವರು ಕೂಡ ಇಲ್ಲಿ ವಾಕ್ ಮಾಡ್ತಾರೆ.‌ಇಂತಾ ಸಂದರ್ಭದಲ್ಲಿ ಆರೋಗ್ಯದಲ್ಲಿ ಹಠತ್ ಏರಯಪೇರಾಗಿ ಪ್ರಾಥಮಿಕ ಚಿಕಿತ್ಸೆ ಸಿಗದೆ ಹಲವರು ಪ್ರಾಣ ಕಳೆದುಕೊಂಡಿದ್ದಾರೆ. ಈ ಹಿನ್ನೆಲೆ ತೋಟಗಾರಿಕೆ ಇಲಾಖೆಯಿಂದ ನಾಲ್ಕು ಗೇಟ್ ಗಳಲ್ಲು ನಮ್ಮ‌ ಕ್ಲಿನಿಕ್  ತೆರೆಯಲು ನಿರ್ಧಾರ‌ ತೆಗೆದು ಕೊಂಡಿದ್ದೇವೆ‌‌ ಎಂದು ಸಚಿವ ಮುನಿರತ್ನ ತಿಳಿಸಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ಕಾಂಗ್ರೆಸ್ ವಿರೋಧ ಪಕ್ಷವಾಗಿರಲು ನಾಲಾಯಕ್: ನಳಿನ್ ಕುಮಾರ್ ಕಟೀಲ್