Select Your Language

Notifications

webdunia
webdunia
webdunia
webdunia

ಹಳದಿ ಎಲೆರೋಗದ ಬಗ್ಗೆ ವಿಧಾನಸೌದದಲ್ಲಿ ಚರ್ಚೆ- ಸಚಿವ ಮುನಿರತ್ನ

Discussion in Vidhan Sabha about yellow leaf disease
ಶೃಂಗೇರಿ , ಸೋಮವಾರ, 12 ಡಿಸೆಂಬರ್ 2022 (20:41 IST)
ಹಳದಿ ಎಲೆರೋಗ, ಎಲೆಚುಕ್ಕಿ ರೋಗ ಹಾಗೂ ಮಲೆನಾಡಿನ ತೋಟಗಳಿಗೆ ಆವರಿಸಿರುವ ಇತರ ರೋಗಗಳ ಕುರಿತು ಗುರುವಾರ ಬೆಳಿಗ್ಗೆ 11ಗಂಟೆಗೆ ವಿಧಾನಸೌಧದಲ್ಲಿ ಇದಕ್ಕೆ ಸಂಬಂಧಿಸಿದ ಎಲ್ಲಾ ಇಲಾಖೆಯ ಅಧಿಕಾರಿಗಳು, ವಿಜ್ಞಾನಿಗಳು, ಶೃಂಗೇರಿ ಕ್ಷೇತ್ರದ ಶಾಸಕರು, ಸಿ.ಎಂ ರಾಜಕೀಯ ಕಾರ್ಯದರ್ಶಿಗಳನ್ನು ಒಳಗೊಂಡಂತೆ ಸಭೆ ನಡೆಸಲಾಗುವುದು ಎಂದು ತೋಟಗಾರಿಕೆ ಇಲಾಖೆಯ ಸಚಿವ ಮುನಿರತ್ನ ತಿಳಿದ್ದಾರೆ.
 
ಮೊದಲು ನಮ್ಮ ದೇಶದ ವಿಜ್ಞಾನಿಗಳ ಜೊತೆ ಸಮಾಲೋಚನೆ ನಡೆಸಿ ಜನವರಿಯಲ್ಲಿ ಇಸ್ರೇಲ್ ದೇಶಕ್ಕೆ ಭೇಟಿ ನೀಡಿ, ಅಲ್ಲಿನ ವಿಜ್ಞಾನಿಗಳ ಜೊತೆ ಚರ್ಚಿಸಿ ಸೂಕ್ತ ಪರಿಹಾರ ಕಂಡುಕೊಳ್ಳಲು ಅವರನ್ನು ಭಾರತ ದೇಶಕ್ಕೆ ಬರಮಾಡಿಕೊಂಡು ಸಮಸ್ಯೆಗಳಿಗೆ ಪರಿಹಾರ ನೀಡುವ ನಿಟ್ಟಿನಲ್ಲಿ ಪ್ರಯತ್ನಿಸಲಾಗುವುದು ಎಂದು ಭರವಸೆ ನೀಡಿದರು.
 
ರೈತರ ಪರ ಕೆಲಸ ಮಾಡದ ವಿಮಾ ಕಂಪೆನಿ ವಿರುದ್ಧ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು. ರಾಜ್ಯದಲ್ಲಿ ಮಳೆಯ ಪ್ರಾಮಣದ ಹೆಚ್ಚಳದಿಂದ 42,000 ಹೆಕ್ಟೇರ್ ಪ್ರದೇಶದಲ್ಲಿ ನಷ್ಟ ಉಂಟಾಗಿದೆ. ತೋಟಗಳ ಔಷಧಿ ಸಿಂಪಡಣೆಗಾಗಿ ನಾಲ್ಕು ಕೋಟಿ ರೂ. ಅನುದಾನವನ್ನು ಸರ್ಕಾರ ಬಿಡುಗಡೆ ಮಾಡಿದೆ. ಇನ್ನೂ 15ಕೋಟಿ ರೂ.ನೀಡಲು ಸರ್ಕಾರ ತಯಾರಿ ಮಾಡಿಕೊಂಡಿದೆ ಎಂದರು.

Share this Story:

Follow Webdunia kannada

ಮುಂದಿನ ಸುದ್ದಿ

ಜನರ ಮುಂದೆ ಹೋಗಲು ಬಿಜೆಪಿಗೆ ಹೆದರಿಕೆ ಇದೆ- ಡಿಕೆಶಿ