Publish Date: Mon, 12 Dec 2022 (20:16 IST)
Updated Date: Mon, 12 Dec 2022 (20:19 IST)
ನೈತಿಕ ಪೊಲೀಸ್ಗಿರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಭಜರಂಗ ದಳಕ್ಕೆ ಸೇರಿದ ನಾಲ್ವರು ಕಾರ್ಯಕರ್ತರನ್ನು ಬಂಧಿಸಿರುವುದಾಗಿ ಪೊಲೀಸರು ಸೋಮವಾರ ತಿಳಿಸಿದ್ದಾರೆ.ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನೈತಿಕ ಪೊಲೀಸ್ಗಿರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಭಜರಂಗ ದಳಕ್ಕೆ ಸೇರಿದ ನಾಲ್ವರು ಕಾರ್ಯಕರ್ತರನ್ನು ಬಂಧಿಸಿರುವುದಾಗಿ ಪೊಲೀಸರು ಸೋಮವಾರ ತಿಳಿಸಿದ್ದಾರೆ.
ಬಂಧಿತ ಹಿಂದೂ ಕಾರ್ಯಕರ್ತರನ್ನು ಕಂಕನಾಡು ಮೂಲದ ಚೇತನ್ ಕುಮಾರ್ (39), ಕಂಕನಾಡಿಯ ಪ್ರಕಾಶ್ (34), ಜೆಪ್ಪಿನಮೊಗರು ನಿವಾಸಿ ಶಿಬಿನ್ ಪಡಿಕಲ್ (36) ಮತ್ತು ಅತ್ತಾವರ ನಿವಾಸಿ 35 ವರ್ಷದ ಗಣೇಶ್ ಎಂದು ಗುರುತಿಸಲಾಗಿದೆ. ಪೊಲೀಸರ ಪ್ರಕಾರ, ಆರೋಪಿಗಳು ಡಿಸೆಂಬರ್ 6 ರಂದು ಆಭರಣ ಅಂಗಡಿಗೆ ನುಗ್ಗಿ ಅನ್ಯ ಧರ್ಮದ ಯುವಕನ ಮೇಲೆ ಹಲ್ಲೆ ನಡೆಸಿದ್ದರು.