ಜಮೀನಿಗೆ ಹೋದವನ ಮುಖ ರಕ್ತ ಸಿಕ್ತ: ಕಾರಣ ಶಾಕಿಂಗ್

ಮಂಗಳವಾರ, 3 ಸೆಪ್ಟಂಬರ್ 2019 (18:44 IST)
ಆತ ಎಂದಿನಂತೆ ತನ್ನ ಜಮೀನಿಗೆ ಹೋಗಿದ್ದನು. ಆದರೆ ಅವನ ಮುಖ ಹಾಗೂ ಜೀವನ ಹೀಗಾಗುತ್ತೆ ಅಂತ ಆತ ಕನಸು ಮನಸಿನಲ್ಲಿಯೂ ಅಂದುಕೊಂಡಿರಲಿಲ್ಲ.

ಜಮೀನಿಗೆ ತೆರಳಿದ್ದ ವೇಳೆ, ರೈತನ ಮೇಲೆ ಕರಡಿ ದಾಳಿ ನಡೆಸಿರುವ ಘಟನೆ ನಡೆದಿದೆ. ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕಿನ ಕೆಳಗೋಟೆ ಗ್ರಾಮದಲ್ಲಿ ನಡೆದ ಘಟನೆ ಇದಾಗಿದೆ.

ತಿಪ್ಪೇಸ್ವಾಮಿ (44) ಗಾಯಗೊಂಡ ರೈತನಾಗಿದ್ದು, ಜಮೀನಿಗೆ ಹೋದ ವೇಳೆ ಕರಡಿ ದಾಳಿ ಮಾಡಿದೆ.

ಈ ವೇಳೆ ಸ್ಥಳೀಯರು  ರಕ್ಷಣೆ ಮಾಡಿದ್ದು, ತೀವ್ರ ಗಾಯಗೊಂಡ ರೈತನನ್ನು ಜಗಳೂರು ತಾಲೂಕು ಆಸ್ಪತ್ರೆ ಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ, ಬಳಿಕ ಹೆಚ್ಚಿನ ಚಿಕಿತ್ಸೆಗೆ ಜಿಲ್ಲಾ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.


ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಅಪಾರ್ಟಮೆಂಟಿನಲ್ಲಿ ಹರೆಯದ ವಿದ್ಯಾರ್ಥಿಗಳು ಮಾಡ್ತಿದ್ರು ಅಂಥ ಕೆಲಸ