Publish Date: Sun, 01 Sep 2019 (11:16 IST)
Updated Date: Sun, 01 Sep 2019 (11:18 IST)
ಮೈಸೂರು : ನಾನು ಮೊದಲೇ ನಾಗರಾಜ, ಹಾವು ಕೆಣಕಿದರೇ ಕಚ್ಚದೇ ಬಿಡೋದಿಲ್ಲ ಎಂಬ ಎಟಿಬಿ ನಾಗರಾಜ್ ಅವರ ಹೇಳಿಕೆಗೆ ಮಾಜಿ ಸಿಎಂ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.
ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಂಟಿಬಿ ನಾಗರಾಜ್ ಮಾಡಿರುವ ಟೀಕೆಗೆ ಕವಡೆ ಕಾಸಿನ ಕಿಮ್ಮತ್ತಿಲ್ಲ. ಒಂದೊಂದು ಸಾರಿ ಒಂದೊಂದು ರೀತಿಯಲ್ಲಿ ಮಾತನಾಡುತ್ತಾರೆ. ಅವರ ಮಾತನ್ನು ನಂಬೋಕೆ ಆಗೋದಿಲ್ಲ ಎಂದು ಹೇಳಿದ್ದಾರೆ.
ನಾನು ಸಿದ್ದರಾಮಯ್ಯನ ಬಂಟ, ನನ್ನ ಹೃದಯ ಬಗೆದರೇ ಸಿದ್ದರಾಮಯ್ಯ ಅವರೇ ಕಾಣುತ್ತಾರೆ ಎಂದು ಹೇಳಿದ ಆಸಾಮಿ, ನಮಗೆ ದ್ರೋಹ ಬಗೆದು, ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಇಂತಹವರನ್ನು ಹೇಗೆ ನಂಬುತ್ತಾರೆ ಜನರು, ಇವರ ಮಾತಿಗೆ ಜನ ತಕ್ಕ ಶಾಸ್ತಿ ಮಾಡಲಿದ್ದಾರೆ ಎಂದು ಅವರು ತಮ್ಮ ಶಿಷ್ಯ ನಾಗರಾಜ್ ವಿರುದ್ಧ ಕಿಡಿಕಾರಿದ್ದಾರೆ.