ಆತನ ಹೊಟ್ಟೆ ಬಗೆದು ತಿಂದ ಹುಲಿ

ಭಾನುವಾರ, 1 ಸೆಪ್ಟಂಬರ್ 2019 (18:46 IST)
ಭೀಕರವಾಗಿ ದಾಳಿ ಮಾಡಿರೋ ಹುಲಿಗೆ ರೈತನೊಬ್ಬ ಆಹಾರವಾಗಿರೋ ಘಟನೆ ನಡೆದಿದೆ.
ಹುಲಿ ದಾಳಿಗೆ ರೈತಬಲಿಯಾಗಿದ್ದಾನೆ.

ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲೂಕಿನ ಎಲಚಟ್ಟಿ ಬಳಿ ಘಟನೆ ನಡೆದಿದೆ. ಚೌಡಹಳ್ಳಿ ಗ್ರಾಮದ ಶಿವಮಾದಯ್ಯ(55) ಮೃತ ಪಟ್ಟ ರೈತನಾಗಿದ್ದಾನೆ.

ಎಲಚಟ್ಟಿ ಗ್ರಾಮದಿಂದ ಎತ್ತುಗಳೊಂದಿಗೆ ಚೌಡಹಳ್ಳಿಗೆ ವಾಪಸ್ ಬರುವಾಗ ಹುಲಿದಾಳಿ ನಡೆಸಿದೆ. ಬಂಡೀಪುರ ಕಾಡಂಚಿನ ಹುಲಿಯಮ್ಮನ ದೇವಸ್ಥಾನ ರಸ್ತೆಯ ಬಳಿ ದಾಳಿ ನಡೆಸಿರುವ ಹುಲಿ ರೈತನ ಹೊಟ್ಟೆ ಬಗೆದು ತಿಂದಿದೆ.

ಸ್ಥಳಕ್ಕೆ ಬಂಡೀಪುರ ಅರಣ್ಯಾಧಿಕಾರಿಗಳು ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ.ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಪೊಲೀಸ್ ಪೇದೆ ಆತ್ಮಹತ್ಯೆಗೆ ಯತ್ನ: ಕಾರಣ ಶಾಕಿಂಗ್