Publish Date: Wed, 26 Sep 2018 (18:01 IST)
Updated Date: Wed, 26 Sep 2018 (18:03 IST)
ಅಪಾರ ಪ್ರಮಾಣದ ಸಿಡಿಮದ್ದು ಸ್ಫೋಟಕ ಸಂಗ್ರಹದ ಮೇಲೆ ದಾಳಿ ನಡೆಸಿರುವ ಪೊಲೀಸರು ಓರ್ವನನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಕಾರವಾರದ ಕುಮಟಾ ತಾಲೂಕಿನ ಗಂಗಾ ವಳಿ ಗ್ರಾಮದಲ್ಲಿ ಘಟನೆ ನಡೆದಿದೆ. ಅಕ್ರಮವಾಗಿ ಸಿಡಿಮದ್ದು ತಯಾರಿಸಲು ಸ್ಪೋಟಕ ಸಂಗ್ರಹಿಸಿರುವ ಬಗ್ಗೆ ಪೊಲೀಸಗೆ ಮಾಹಿತಿ ಲಭ್ಯವಾಗಿದೆ.
ದಸರಾ ಹಬ್ಬದ ಹಿನ್ನೆಲೆ ಅಕ್ರಮವಾಗಿ ಸಿಡಿಮದ್ದು ತಯಾರಿಕೆಗೆ ಈಗಿನಿಂದಲೇ ತಯಾರಿ ನಡೆಸಿದ್ದ ಆರೋಪಿಯನ್ನು ಬಂಧಿಸಲಾಗಿದೆ. ಸ್ಥಳಕ್ಕೆ ಗೋಕರ್ಣ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.
ಸ್ಪೋಟಕವನ್ನು ವಶಕ್ಕೆ ಪಡೆದ ಪೊಲೀಸರು ಆರೋಪಿಯನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಆರೋಪಿ ರಜಾಕ್ ಹಸನ್ ಸಾಬ್ ಪೊಲೀಸರ ವಶದಲ್ಲಿದ್ದಾನೆ. ಈ ಕುರಿತು ಗೋಕರ್ಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.