Publish Date: Sat, 22 Sep 2018 (07:25 IST)
Updated Date: Sat, 22 Sep 2018 (07:28 IST)
ಹಾವೇರಿ: ಅನೈತಿಕ ಸಂಬಂಧದ ಹಿನ್ನೆಲೆಯಲ್ಲಿ ವಿವಾಹಿತ ಮಹಿಳೆಯನ್ನ ಕೊಲೆ ಮಾಡಿರುವ ಘಟನೆ ಬ್ಯಾಡಗಿ ತಾಲೂಕಿನ ದುಮ್ಯಾಳ ಗ್ರಾಮದ ಬಳಿ ನಡೆದಿದೆ.
ರಾಧಾ ಕಾಂಡೇಕರ್ ಮೃತ ಮಹಿಳೆ. ರಾಧಾ ಮತ್ತು ಆರೋಪಿ ಅರುಣ ಇಬ್ಬರ ನಡುವೆ ಅನೈತಿಕ ಸಂಬಂಧವಿದ್ದಿತ್ತು. ಆರೋಪಿ ಅರುಣ ಪದೇ ಪದೇ ರಾಧಾಳನ್ನ ದೈಹಿಕ ಸಂಬಂಧಕ್ಕೆ ಕರೆಯುತ್ತಿದ್ದನಂತೆ. ಅದೇ ರೀತಿ ಗುರುವಾರ ರಾತ್ರಿ ರಾಧಾಳನ್ನ ಆರೋಪಿ ಅರುಣ ದೈಹಿಕ ಸಂಪರ್ಕಕ್ಕೆ ಕರೆದಿದ್ದಾನೆ.
ಆದರೆ ಅದಕ್ಕೆ ಮೃತ ರಾಧಾ ನಿರಾಕರಿಸಿದಾಗ ಇದರಿಂದ ಕೋಪಗೊಂಡು ಮನೆಯಲ್ಲಿ ಯಾರೂ ಇಲ್ಲದ ವೇಳೆ ಆಕೆಯ ಮನೆಯ ಸಮೀಪದಲ್ಲೇ ಕತ್ತು ಹಿಸುಗಿ ಹತ್ಯೆಗೈದು ಪರಾರಿಯಾಗಿದ್ದಾನೆ. ಪ್ರಕರಣವು ಕಾಗಿನೆಲೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.