Publish Date: Fri, 21 Sep 2018 (16:09 IST)
Updated Date: Fri, 21 Sep 2018 (16:11 IST)
ಒಂಟಿ ಮಹಿಳೆಯರು ಹಾಗೂ ಗೃಹಿಣಿಯರ ಸರಗಳ್ಳತನ ಮಾಡುತ್ತಿದ್ದ ಇಬ್ಬರು ಕಳ್ಳರನ್ನು ಪೊಲೀಸರು ಬಂಧಿಸಿದ್ದಾರೆ.
ಮೈಸೂರು ಜಿಲ್ಲೆ ಟಿ.ನರಸೀಪುರ ತಾಲೂಕಿನ ದೊಡ್ಡಕವಲಂದೆ ಪೊಲೀಸರು ಕಾರ್ಯಾಚರಣೆ ನಡೆಸಿ ಕಳ್ಳರನ್ನು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.
ಪಿಲ್ಲಹಳ್ಳಿ ಗ್ರಾಮದ ಬಿ. ರಾಜೇಶ್ (20) ಮತ್ತು ಮಹದೇವಸ್ವಾಮಿ (19) ಬಂಧನಕ್ಕೆ ಒಳಗಾದ ಆರೋಪಿಗಳಾಗಿದ್ದಾರೆ.
ಟಿ. ನರಸೀಪುರದ ಮೂಗೂರು, ನಂಜನಗೂಡಿನ ಆಲಂಬೂರು ಸೇರಿ ಹಲವು ಭಾಗಗಳಲ್ಲಿ ಸರಗಳ್ಳತನ ಮಾಡುತ್ತಿದ್ದ ಆರೋಪಿಗಳು ಇವರಾಗಿದ್ದಾರೆ.
ಆರೋಪಿಗಳಿಂದ 2 ಲಕ್ಷ ಮೌಲ್ಯದ 60 ಗ್ರಾಂ. ತೂಕದ 3 ಚಿನ್ನದ ನೆಕ್ಲೇಸ್, 1 ಚಿನ್ನದ ಸರ ವಶ ಪಡಿಸಿಕೊಳ್ಳಲಾಗಿದೆ.