Select Your Language

Notifications

webdunia
webdunia
webdunia
Thursday, 10 April 2025
webdunia

ಹೆಣ್ಣು ಒಲಿದರೆ ನಾರಿ, ಮುನಿದರೆ ಮಾರಿ ಎನ್ನುವುದಕ್ಕೆ ಈ ಘಟನೆಯೇ ಸಾಕ್ಷಿ

ಮಹಾರಾಷ್ಟ್ರ
ಮಹಾರಾಷ್ಟ್ರ , ಬುಧವಾರ, 19 ಸೆಪ್ಟಂಬರ್ 2018 (07:24 IST)
ಮಹಾರಾಷ್ಟ್ರ : ಹೆಣ್ಣು ಒಲಿದರೆ ನಾರಿ, ಮುನಿದರೆ ಮಾರಿ ಎನ್ನುತ್ತಾರೆ. ಈ ಮಾತು ಅಕ್ಷರಸಹ ನಿಜ ಎನ್ನುವುದಕ್ಕೆ  ಇದೀಗ ಮಹಾರಾಷ್ಟ್ರದ ನಾಗಬಿಡ ಪ್ರದೇಶದಲ್ಲಿ ನಡೆದ ಘಟನೆಯೇ ಸಾಕ್ಷಿ.


ಚಿಂಚೊಳ್ಳಿ ಗ್ರಾಮದ ಯುವಕನೊರ್ವ ಬ್ರಹ್ಮಪುರಿ ತಾಲೂಕಿನ ಯುವತಿಯೊಬ್ಬಳನ್ನು  ಮದುವೆಯಾಗುವುದಾಗಿ ನಂಬಿಸಿ ಆಕೆಯ ಜೊತೆ ದೈಹಿಕ ಸಂಪರ್ಕ ಬೆಳೆಸಿ ನಂತರ ಆಕೆಯನ್ನು ಮದುವೆಯಾಗಲು ನಿರಾಕರಿಸಿದ್ದಾನೆ. ಇದರಿಂದ ರೌದ್ರವತಾರ ತಾಳಿದ ಆಕೆ ಆ ಯುವಕನನ್ನು ರಾತ್ರಿ ವೇಳೆ ನಡುಬೀದಿಯಲ್ಲಿ ಕತ್ತಿಯಿಂದ ಹಲ್ಲೆ ಮಾಡಿದ್ದಾಳೆ.


ಈ ಘಟನೆ ಸೋಮವಾರ ರಾತ್ರಿ ವೇಳೆ ನಡೆದಿದ್ದು, ಇದೀಗ ಯುವತಿಯಿಂದ  ಹಲ್ಲೆಗೊಳಗಾದ ಯುವಕನನ್ನು  ಚಂದ್ರಪುರ ಜಿಲ್ಲಾಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಗಬಿಡ ಪೊಲೀಸ್​ ಠಾಣೆಯಲ್ಲಿ ಯುವತಿ ವಿರುದ್ಧ ದೂರು ದಾಖಲಾಗಿದೆ. ಆದರೆ ಇಲ್ಲಿಯವರೆಗೆ ಆಕೆಯನ್ನ ಪೊಲೀಸರು ಬಂಧಿಸಿಲ್ಲ ಎನ್ನಲಾಗಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ವಿದ್ಯಾರ್ಥಿನಿಯ ಮೇಲೆ ಸಹಪಾಠಿಗಳಿಂದ ಅತ್ಯಾಚಾರ ; ಸಾಕ್ಷ್ಯ ನಾಶಕ್ಕೆ ಯತ್ನಿಸಿದ ಪ್ರಿನ್ಸಿಪಾಲ್