Publish Date: Fri, 29 Jun 2018 (18:50 IST)
Updated Date: Fri, 29 Jun 2018 (18:55 IST)
ಕಂಠಪೂರ್ತಿ ಕುಡಿದ ಅಮಲಿನಲ್ಲಿ ವ್ಯಕ್ತಿಯೊಬ್ಬ ಮೊಬೈಲ್ ಟವರ್ ಏರಿ ಕುಳಿತು ಕೆಲಕಾಲ ಆತಂಕ ಸೃಷ್ಟಿಸಿದ ಘಟನೆ ನಡೆದಿದೆ.
ಕುಡಿದ ಅಮಲಿನಲ್ಲಿ ಮೈಸೂರಿನ ಹಿನಕಲ್ ನಿವಾಸಿ ರಮೇಶ್ ಕುಮಾರ (40) ಟವರ್ ಏರಿದ ವ್ಯಕ್ತಿಯಾಗಿದ್ದಾರೆ. ಹಿನಕಲ್ ನ ಟೆಂಟ್ ಬಳಿ ಇರುವ ಟವರ್ ಏರಿದ ರಮೇಶ ನನ್ನು ಕೆಳಗೆ ಇಳಿಸಲು ಪೊಲೀಸರು ಹರ ಸಾಹಸ ಪಟ್ಟರು.
ಸ್ಥಳಕ್ಕೆ ಅಗ್ನಿ ಶಾಮಕ ಸಿಬ್ಬಂದಿ ಕೂಡ ಹಾಜರಾಗಿ ಟವರ್ ಏರಿದ ರಮೇಶ್ ನನ್ನು ಕೆಳಗೆ ಇಳಿಸಲು ತೀವ್ರ ಪ್ರಯತ್ನ ಪಟ್ಟರು. ಪಿಹೆಚ್‍ಡಿ ಮಾಡಿರುವ ರಮೇಶ್ ಹಲವು ಕಾಲೇಜುಗಳಲ್ಲಿ ಪ್ರಾಧ್ಯಾಪಕರಾಗಿ ಕೆಲಸ ಮಾಡಿದ್ದಾರೆ. ಇವರಿಗೆ ಮಗಳು, ಪತ್ನಿ ಇದ್ದಾರೆ. ಈ ಹಿಂದೆ ಕೂಡ ಒಂದು ಮೊಬೈಲ್ ಟವರ್ ಏರಿ ರಮೇಶ್ ಆತಂಕ ಉಂಟುಮಾಡಿದ್ದರು. ಈಗ ಎರಡನೇ ಬಾರಿ ಏರಿದ್ದಾರೆ.
ಕುಡಿದ ಅಮಲು, ಮೊಬೈಲ್ ಟವರ್, ಆತಂಕ,