ಉತ್ತರ ಪ್ರದೇಶದ ಆಸ್ಪತ್ರೆಗಳಲ್ಲಿ ಸೌಲಭ್ಯಗಳ ಕೊರತೆ ಇರುವ ಬಗ್ಗೆ ಸುದ್ದಿ ಕೇಳಿರುತ್ತೇವೆ. ಆದರೆ, ಇಲ್ಲೊಬ್ಬ ವೈದ್ಯ ಕಂಠಪೂರ್ತಿ ಕುಡಿದು ಆಸ್ಪತ್ರೆಗೆ ಬಂದು ಗಲಾಟೆ ಮಾಡಿರುವ ಬಗ್ಗೆ ವರದಿಯಾಗಿದೆ.
ಮೊರಾದಾಬಾದ್ ಆಸ್ಪತ್ರೆಗೆ ಕುಡಿದು ಬಂದ ವೈದ್ಯನ ರಂಪಾಟದ ಬಗ್ಗೆ ಆಸ್ಪತ್ರೆಯಲ್ಲಿದ್ದ ರೋಗಿಗಳ ಸಂಬಂಧಿಕರು ವಿಡಿಯೋ ಮಾಡಿದ್ದಾರೆ. ಬಳಿಕ ವಿಡಿಯೋವನ್ನ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ.
ತುರ್ತು ಚಿಕಿತ್ಸಾ ಘಟಕಕ್ಕೆ ಬಂದ ವೈದ್ಯ ಅಲ್ಲಿ ಚಿಕಿತ್ಸೆಗೆ ಬಂದಿದ್ದವರ ಜೊತೆ ಗಲಾಟೆ ತೆಗೆದಿದ್ದಾನೆ. ಅಷ್ಟೇ ಅಲ್ಲ, ಹಿಂದಿಯಲ್ಲಿ ಅಶ್ಲೀಲ ಭಾಷೆ ಬಳಸಿ ವೈದ್ಯ ಅರಚಾಡಿದ್ದಾನೆ. ಅಂದ ಹಾಗೆ, ಇದು ಮೊದಲ ಬಾರಿಗೆ ನಡೆದ ಘಟನೆಯಲ್ಲ, ಹಲವು ಬಾರಿ ವೈದ್ಯ ಕುಡಿದು ಆಸ್ಪತ್ರೆಗೆ ಬಂದಿದ್ದಾನೆ. ಮಾಧ್ಯಮಗಳ ಮೂಲಕ ಜಗತ್ಜಾಹೀರಾದ ಬಳಿಕ ಆಡಳಿತ ಮಂಡಳಿ ಕ್ರಮದ ಭರವಸೆ ನೀಡಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ