Select Your Language

Notifications

webdunia
webdunia
webdunia
webdunia

ಕಾಂಗ್ರೆಸ್ ಮನೆ ಬಾಗಿಲಿಗೆ ಬೀಗ ಬೀಳುತ್ತೆ- ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್

The door of the Congress will be locked - BJP State President Nalin Kumar
bangalore , ಗುರುವಾರ, 3 ನವೆಂಬರ್ 2022 (18:38 IST)
ಮುದ್ದಹನುಮೇಗೌಡ ಬಿಜೆಪಿ ಸೇರ್ಪಡೆ ವಿಚಾರವಾಗಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಪ್ರತಿಕ್ರಿಯೆ ನೀಡಿದ್ಧಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ನಾವು ಯಾರೂ ಎಣ್ಣೆ, ಬಿರಿಯಾನಿ ದುಡ್ಡು ಕೊಟ್ಟು ಜನರನ್ನು ಕರೆದುಕೊಂಡು ಬಂದಿರಲಿಲ್ಲ. ಹಿಂದೆ ನಾನು ಮುದ್ದಹನುಮೇಗೌಡ  ಅವರನ್ನು ಪಕ್ಷಕ್ಕೆ ಕರೆದಿದ್ದೆ. ಆದರೆ ಅವಾಗ ಅವರು ಬಂದಿರಲಿಲ್ಲ. ಕೊನೆಗೆ ಅವರನ್ನು ಕಾಂಗ್ರೆಸ್​ ಹೊರಗೆ ಹಾಕ್ತು. ಇವಾಗ್ಲಾದ್ರು ಮುದ್ದಹನುಮೇಗೌಡರಿಗೆ ಕಾಂಗ್ರೆಸ್ ಬಣ್ಣ ಏನೆಂದು ಗೊತ್ತಾಯ್ತಲ್ಲ. ರಾಜ್ಯದಲ್ಲಿ ಸಿದ್ದರಾಮಯ್ಯ ಹಾಗೂ ಡಿಕೆಶಿ ಯ ಎರಡು ನಾಟಕ ಕಂಪನಿಗಳು ಇವೆ. ಹೀಗಾಗಿ ಕಲ್ಬುರ್ಗಿಯ ಸಮಾವೇಶ ನೋಡಿ ಕಾಂಗ್ರೆಸ್​ನವರಿಗೆ ಸೋಲುವ ಭಯ ಶುರುವಾಗಿದೆ ಎಂದು ಹೇಳಿದ್ದಾರೆ. ಇನ್ನು ಸ್ವಲ್ಪ ದಿನಗಳ ಕಾಲ ಕಾದು ನೋಡಿ, ಕಾಂಗ್ರೆಸ್ ಮನೆ ಬಾಗಿಲಿಗೆ ಬೀಗ ಬೀಳುತ್ತದೆ. ಎಲ್ಲರೂ ಕೂಡ ಸ್ವಲ್ಪ ದಿನಗಳಲ್ಲಿ BJP ಸೇರ್ತಾರೆ. ರಾಹುಲ್ ಗಾಂಧಿ ಕಾಲಿಟ್ಟ ಕಡೆಯೆಲ್ಲ ಕಾಂಗ್ರೆಸ್ ಸೋಲುತ್ತೆ. ಇದಕ್ಕೆ ಕಳೆದ ಕೊಳ್ಳೇಗಾಲ ಚುನಾವಣೆಯ ಫಲಿತಾಂಶವೇ ಸಾಕ್ಷಿ ಎಂದರು.

Share this Story:

Follow Webdunia kannada

ಮುಂದಿನ ಸುದ್ದಿ

ಅತ್ಯಾಚಾರ, ಕೊಲೆ ಆರೋಪಿಗಳು ವಶಕ್ಕೆ