Select Your Language

Notifications

webdunia
webdunia
webdunia
webdunia

ಕಾಂಗ್ರೆಸ್ ನಲ್ಲಿ ಶುರುವಾಯಿತು ಜನಪ್ರತಿನಿಧಿಗಳ ಉಚ್ಛಾಟನೆ ಪರ್ವ

ಕಾಂಗ್ರೆಸ್ ನಲ್ಲಿ ಶುರುವಾಯಿತು ಜನಪ್ರತಿನಿಧಿಗಳ ಉಚ್ಛಾಟನೆ ಪರ್ವ
ಶಿವಮೊಗ್ಗ , ಬುಧವಾರ, 26 ಜೂನ್ 2019 (15:35 IST)
ಪಕ್ಷ ವಿರೋಧಿ ಚಟುವಟಿಕೆ ಆರೋಪದಡಿ ಕಾಂಗ್ರೆಸ್ ತನ್ನ ಜನಪ್ರತಿನಿಧಿಗಳನ್ನು ಉಚ್ಛಾಟಿಸುತ್ತಿದೆ.

ಸೊರಬ ತಾಲೂಕು ಪಂಚಾಯತ್ ಸದಸ್ಯರನ್ನು  ಕಾಂಗ್ರೆಸ್ ಪಕ್ಷದಿಂದ ಉಚ್ಚಾಟಿಸಲಾಗಿದೆ.

ಆನವಟ್ಟಿಯ ಪಿ.ಹನುಮಂತಪ್ಪ, ತತ್ತೂರು ಕ್ಷೇತ್ರದ ಮೀನಾಕ್ಷಮ್ಮ ಹಾಗೂ ಶಿಗ್ಗಾದ ನಾಗರಾಜ್ ಎಂಬ ಈ ಮೂವರು ಕಾಂಗ್ರೆಸ್ ಪಕ್ಷದಿಂದ ತಾಲೂಕು ಪಂಚಾಯತ್ ಸದಸ್ಯರಾಗಿದ್ದರು.

ಜೂನ್ 21 ರಂದು ಶಿವಮೊಗ್ಗದಲ್ಲಿ ನಡೆದ ಕಾಂಗ್ರೆಸ್-ಕಾಂಗ್ರೆಸ್ ಕೃತಜ್ಞತಾ ಸಭೆಯ ವೇದಿಕೆಯಲ್ಲಿ ಹಾಕಲಾಗಿದ್ದ ಫ್ಲೆಕ್ಸ್ ಬಗ್ಗೆ ಅವಹೇಳನಕಾರಿಯಾಗಿ ವಾಟ್ಸಪ್ ಮತ್ತು ಫೇಸ್ ಬುಕ್ ಖಾತೆಯಳಲ್ಲಿ ಸುದ್ದಿಗಳನ್ನು ಹರಿಬಿಟ್ಟ ಪರಿಣಾಮ ಪಕ್ಷ ಸಂಘಟನೆಗೆ ಧಕ್ಕೆಯಾಗಿದೆ.

ಅಲ್ಲದೇ ಮಹಾನಗರ ಪಾಲಿಕೆ ಚುನಾವಣೆಯಲ್ಲಿ 8 ನೇ ವಾರ್ಡಿನಿಂದ ಸ್ಪರ್ಧಿಸಿದ್ದ ಬಿ.ನಾಗರಾಜ್ ವಿರುದ್ಧ ಸ್ಪರ್ಧಿಸಿದ್ದ ಸ್ವತಂತ್ರ ಅಭ್ಯರ್ಥಿಯನ್ನು ಬೆಂಬಲಿಸಿ ಚುನಾವಣಾ ಪ್ರಚಾರ ಮಾಡಿರುವುದು ಸೇರಿದಂತೆ ಹಲವು ಪಕ್ಷ ವಿರೋಧಿ ಚಟುವಟಿಕೆಗಳ ಆರೋಪ‌ ಕೇಳಿಬಂದಿವೆ.

ಈ ಹಿನ್ನೆಲೆಯಲ್ಲಿ ಶಿವಮೊಗ್ಗ ಉತ್ತರ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಬಿ.ನಾಗರಾಜ್ ದೂರಿನ‌ ಹಿನ್ನೆಲೆಯಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್.ಎಸ್.ಸುಂದರೇಶ್ ಉಚ್ಚಾಟಿಸಿ ಆದೇಶ ಹೊರಡಿಸಿದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

ಆ ಸಚಿವರಿಗೆ ಇನ್ನೂ ಒಳ್ಳೆಯ ಖಾತೆ ಕೊಡಬೇಕಂತೆ!