Select Your Language

Notifications

webdunia
webdunia
webdunia
webdunia

ಗುಂಡಿ ಮುಚ್ಚೊಕೆ ಮತ್ತೆ ಮೂರು ದಿನ ಡೆಡ್ ಲೈನ್ ಕೊಟ್ಟ ಆಯುಕ್ತರು

ಗುಂಡಿ ಮುಚ್ಚೊಕೆ ಮತ್ತೆ ಮೂರು ದಿನ ಡೆಡ್ ಲೈನ್ ಕೊಟ್ಟ ಆಯುಕ್ತರು
bangalore , ಮಂಗಳವಾರ, 15 ನವೆಂಬರ್ 2022 (14:51 IST)
ಗುಂಡಿ ಮುಚ್ಚೊಕೆ ಗಡುವಿನ ಮೇಲೆ ಗಡುವನ್ನ ಬಿಬಿಎಂಪಿ ಆಯುಕ್ತರು ತೆಗೆದುಕೊಳ್ತಿದ್ದಾರೆ. ಹವಾಮಾನ ನೆಪ ಹೇಳಿ  ಮತ್ತೆ ಕಾಮಗಾರಿ ಮುಂದೂಡಿಕೆ ಮಾಡಿದ್ದಾರೆ.ಬೆಂಗಳೂರಿನಲ್ಲಿ ಇನ್ನೂ ಎರಡು ದಿನ ಮಳೆಯಾಗುವ ಮುನ್ಸೂಚನೆಯನ್ನ ಹವಾಮಾನ ಇಲಾಖೆ ನೀಡಿದೆ .ಇದೇ  ಪಾಲಿಕೆಗೆ ವರದಾನವಾದಂತೆಯಾಗಿದೆ.ಗುಂಡಿ ಮುಚ್ಚೊಕೆ ಮತ್ತೊಂದು ಕುಂಠು ನೆಪವನ್ನ ಪಾಲಿಕೆ ಮಾಡಿಕೊಂಡಿದೆ.
 
ನವೆಂಬರ್ 15 ಕ್ಕೆ ಡೆಡ್ ಲೈನ್ ತೆಗೆದುಕೊಂಡಿದ್ದ  ಪಾಲಿಕೆ ಆಯುಕ್ತರಿಗೆ ಇಂದು ಡೆಡ್ ಲೈಲ್ ಅಂತ್ಯವಾಯ್ತು. ಈಗ ಪಾಲಿಕೆಯ ಮತ್ತೊಂದು ನೆಪ ಶುರುವಾದಂತೆಯಾಗಿದೆ.ಮತ್ತೆ ಇದೇ ತಿಂಗಳ 19 ಕ್ಕೆ ಗುಂಡಿ ಮುಚ್ಚಕ್ಕೆ ಆಯುಕ್ತರು ಡೆಡ್ ಲೈನ್ ಕೊಟ್ಟಿದ್ದಾರೆ.ಯಾವಾಗ ಪಾಟ್ ಹೋಲ್   ಫ್ರೀ ಆಗುತ್ತೆ ಬೆಂಗಳೂರು?ಇದುವರೆಗೂ 8 ವಲಯದಲ್ಲಿ 32 ಸಾವಿರ ಗುಂಡಿಯನ್ನ ಪಾಲಿಕೆ ಅಧಿಕಾರಿಗಳು ಗುರುತುಮಾಡಿದ್ದಾರೆ.31 ಸಾವಿರ ಗುಂಡಿ ಮುಚ್ಚಲಾಗಿದೆ‌ ಇನ್ನೊಂದು  ಸಾವಿರ ಗುಂಡಿ ಮುಚ್ಚೊದು ಬಾಕಿ ಇದೆ ಎಂದು ಸುಳ್ಳು‌ ನೆಪವನ್ನ ಪಾಲಿಕೆ ಆಯುಕ್ತ ತುಷಾರ್ ಗಿರಿನಾಥ್ ಹೇಳಿದ್ದಾರೆ.
 
ನಗರದ ಪ್ರಮುಖ ರಸ್ತೆಗಳ ಗುಂಡಿ ಮುಚ್ಚು ಶೋ ಅಪ್ ನ್ನ ಆಯುಕ್ತರು ಮಾಡಿದ್ದು,ಬೆಂಗಳೂರಿನ ವಿವಿಧ ಬಡಾವಣೆಯಲ್ಲಿ ಈಗಲೂ ಸಾವಿರಾರು ಗುಂಡಿಗಳು ರಾರಾಜಿಸುತ್ತಿವೆ.ರಾಜಾಜಿನಗರದ ರಸ್ತೆ ಅಪಘಾತವನ್ನು ಆಯುಕ್ತರು ಸಮರ್ಥಿಸಿಕೊಂಡಿದ್ದಾರೆ.BWSSB ನಿರ್ಲಕ್ಷ್ಯ ಅಪಘಾತಕ್ಕೆ ಕಾರಣವಾಗಿದೆ. ನೀರಿನ ಕೊಳವೆ ಪೈಪ್ ಅಳವಡಿಸಲು BWSSB ಗುಂಡಿ ತೋಡಿ ಜಲ್ಲಿ ಕಲ್ಲು ಮುಚ್ಚಿ ಹೋಗಿದ್ದಾರೆ. ಇದರಿಂದ ಯುವಕನ್ನ ಬೈಕ್ ಸ್ಕೀಡ್ ಆಗಿ ಅಪಘಾತ ಸಂಭವಿಸಿದೆ ಈ ಬಗ್ಗೆ ತನಿಖಾ ವರದಿ ಬಂದ ನಂತರ ಕ್ರಮ ಕೈಗೊಳ್ಳಲಾಗುತ್ತೆ ಎಂದು ಆಯುಕ್ತರು ಸಮರ್ಥನೆಯ ಉತ್ತರ ಹೇಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಲಿವರ್ಪೂಲ್ ಖರೀದಿಗೆ ಮುಂದಾದ ಅಂಬಾನಿ