Publish Date: Tue, 15 Nov 2022 (14:40 IST)
Updated Date: Tue, 15 Nov 2022 (13:53 IST)
ಲಂಡನ್ : ಇಂಗ್ಲೆಂಡ್ನ ಪ್ರಸಿದ್ಧ ಲಿವರ್ಪೂಲ್ ಫುಟ್ಬಾಲ್ ತಂಡವನ್ನು ಮುಕೇಶ್ ಅಂಬಾನಿ ಖರೀದಿಸಲು ಮುಂದಾಗಿದ್ದಾರೆ.
ವಿಶ್ವದ 8ನೇ ಶ್ರೀಮಂತ ವ್ಯಕ್ತಿಯಾಗಿರುವ ರಿಲಯನ್ಸ್ ಇಂಡಸ್ಟ್ರೀಸ್ ಕಂಪನಿಯ ಮುಖ್ಯಸ್ಥ ಮುಕೇಶ್ ಅಂಬಾನಿ ಈಗಾಲೇ ಐಪಿಎಲ್ನಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ಖರೀದಿಸಿದ್ದಾರೆ. ಈಗ ಫುಟ್ಬಾಲ್ ತಂಡದ ಮೇಲೆ ಕಣ್ಣಿಟ್ಟಿದ್ದಾರೆ.
ಲಿವರ್ಪೂಲ್ ಮಾಲೀಕತ್ವ ಹೊಂದಿರುವ ಫೆನ್ವೇ ಸ್ಫೋರ್ಟ್ಸ್ ಗ್ರೂಪ್ ತಂಡವನ್ನು 4 ಶತಕೋಟಿ ಪೌಂಡ್ ಮಾರಾಟ ಮಾಡಲು ಮುಂದಾಗಿದೆ ಎಂದು ವರದಿಯಾಗಿದೆ.