Publish Date: Tue, 15 Nov 2022 (11:12 IST)
Updated Date: Tue, 15 Nov 2022 (11:15 IST)
ಬೆಳಗಾವಿ : ಧರ್ಮ ಮತ್ತು ಜಾತಿಗಳ ಮಧ್ಯೆ ವ್ಯಾಪಕ ಸಂಘರ್ಷ ಹುಟ್ಟು ಹಾಕುವಂತ ಕೆಲಸವನ್ನು ಕೆಲ ರಾಜಕಾರಣಿಗಳು ಮಾಡುತ್ತಿರುವುದು ವಿಪರ್ಯಾಸದ ಸಂಗತಿ ಎಂದು ಬಾಳೆಹೊನ್ನೂರು ರಂಭಾಪುರಿ ಡಾ.ವೀರಸೋಮೇಶ್ವರ ಶಿವಾಚಾರ್ಯ ಸ್ವಾಮೀಜಿ ಬೇಸರ ವ್ಯಕ್ತಪಡಿಸಿದರು.
ಬೈಲಹೊಂಗಲ ಪಟ್ಟಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಜಕೀಯ ಧುರೀಣರು ಸರ್ವ ಜನಾಂಗದ ಶ್ರೇಯೋಭಿವೃದ್ಧಿಗೆ ಗಮನ ಹರಿಸದೇ ಶಾಂತಿ ಮತ್ತು ಸೌಹಾರ್ದತೆ ಬೆಳೆಸದೇ ಅಧಿಕಾರದ ಗದ್ದುಗೆಗಾಗಿ ಜಾತಿಯಲ್ಲಿ ವಿಷ ಬೀಜ ಬಿತ್ತುತ್ತಿದ್ದಾರೆ.
ಜನರ ಭಾವನೆಗಳನ್ನು ಕೆರಳಿಸುವಂತ ಕೆಲಸ ಮಾಡುತ್ತಿದ್ದಾರೆ. ಇಂತಹ ಕೃತ್ಯವನ್ನು ಯಾರೂ ಮಾಡಬಾರದೆಂಬ ಸಂದೇಶ ನಾವು ನೀಡಲು ಇಚ್ಚಿಸುತ್ತೇವೆ ಎಂದರು.
ಭಾರತೀಯ ಉತ್ಕೃಷ್ಟ ಸಂಸ್ಕೃತಿಯಲ್ಲಿ ಎಲ್ಲರೂ ಒಂದಾಗಿ ಬಾಳಬೇಕು. ಶಾಂತಿ, ನೆಮ್ಮದಿಯಿಂದ ಬದುಕು ಕಟ್ಟಿಕೊಳ್ಳಬೇಕು. ಪ್ರತಿಯೊಬ್ಬರೂ ತಮ್ಮ, ತಮ್ಮ ಧರ್ಮಗಳಲ್ಲಿ ನಿಷ್ಠೆ ಹೊಂದಿರಬೇಕು.