Publish Date: Mon, 28 Oct 2019 (19:35 IST)
Updated Date: Mon, 28 Oct 2019 (19:36 IST)
ಟಿಪ್ಪು ಸುಲ್ತಾನ್ ಜಯಂತಿ ಆಚರಣೆಗೆ ನಮ್ಮ ವಿರೋಧವಿದೆ. ಹೀಗಂತ ಉಪಮುಖ್ಯಮಂತ್ರಿ ಹೇಳಿದ್ದಾರೆ.
ಭಾರತೀಯ ಜನತಾ ಪಕ್ಷವು ಯಾವುದೇ ಕಾರಣಕ್ಕೂ ಟಿಪ್ಪು ಸುಲ್ತಾನ್ ಜಯಂತಿಯನ್ನು ಆಚರಣೆ ಮಾಡಬಾರದು ಅಂತ ತೀರ್ಮಾನ ಮಾಡಿದೆ. ಟಿಪ್ಪು ಸುಲ್ತಾನ್ ಅದೆಷ್ಟೋ ಅಮಾಯಕರನ್ನು ಕೊಂದಿದ್ದಾನೆ.
ಅಲ್ಲದೇ ಟಿಪ್ಪು ಸುಲ್ತಾನ್ ಮತಾಂಧನಾಗಿದ್ದನು. ಹೀಗಂತ ಡಿಸಿಎಂ ಅಶ್ವತ್ಥನಾರಾಯಣ ಆರೋಪಿಸಿದ್ದಾರೆ.
200 ವರ್ಷಗಳ ಹಿಂದೆ ನರಕಚರ್ತುದಶಿ ದಿನದಂದೇ ಮೇಲುಕೋಟೆಯಲ್ಲಿ ಸುಮಾರು 800 ಕ್ಕೂ ಅಧಿಕ ಮಂದಿಯನ್ನ ಟಿಪ್ಪು ಸುಲ್ತಾನ್ ನರಹೋಮ ಮಾಡಿದ್ದ. ಟಿಪ್ಪು ಸುಲ್ತಾನನ ಜಯಂತಿ ಆಚರಣೆ ಮಾಡಬಾರದು. ಇದೇ ನಮ್ಮ ಸ್ಪಷ್ಟ ನಿಲುವು ಅಂತ ಹೇಳಿದ್ದಾರೆ.